Publish Date: Wed, 07 Jun 2017 (08:27 IST)
Updated Date: Wed, 07 Jun 2017 (08:29 IST)
ಲಂಡನ್: ಭಾರತೀಯ ಸಿನಿಮಾ ರಂಗದಲ್ಲೇ ಹೊಸ ಅಲೆ ಸೃಷ್ಟಿಸಿದ ಸಿನಿಮಾ ಬಾಹುಬಲಿ. ಆದರೆ ಟೀಂ ಇಂಡಿಯಾದಲ್ಲೂ ಒಬ್ಬ ಬಾಹುಬಲಿ ಇದ್ದಾರಂತೆ. ಯಾರವರು ಎಂಬ ಕುತೂಹಲವೇ? ಈ ಸುದ್ದಿ ಓದಿ.
ಪಾಕಿಸ್ತಾನ ತಂಡವನ್ನು ಮಣಿಸಿ ಬೀಗುತ್ತಿರುವ ಟೀಂ ಇಂಡಿಯಾ ಸದಸ್ಯರು ತಮ್ಮ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಫನ್ನಿ ಫೋಟೋಗಳನ್ನು ಹಾಕಿ ಮೋಜು ಮಾಡುತ್ತಿದ್ದಾರೆ. ಅದೇ ರೀತಿ ರೋಹಿತ್ ಶರ್ಮಾ ಕೂಡಾ ಒಂದು ಫೋಟೋ ಹಾಕಿದ್ದರು.
ಫೋಟೋದ ಜತೆಗೆ ‘ಟೀಂ ಇಂಡಿಯಾದ ಬಾಹುಬಲಿ ಜತೆಗಿರುವುದು ಯಾವತ್ತೂ ಖುಷಿಯ ಸಂಗತಿ’ ಎಂದು ರೋಹಿತ್ ಅಡಿಬರಹ ಬರೆದಿದ್ದರು. ಅಷ್ಟಕ್ಕೂ ಈ ಬಾಹುಬಲಿ ಯಾರು ಗೊತ್ತಾ? ಯಾವುದೇ ಬ್ಯಾಟ್ಸ್ ಮನ್ ಅಲ್ಲ, ಬೌಲರ್ ಕೂಡಾ ಅಲ್ಲ.
ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಪುತ್ರ ಜೊರಾವರ್! ಆತನೆಂದರೆ ರೋಹಿತ್ ಶರ್ಮಾಗೆ ಅಚ್ಚುಮೆಚ್ಚು. ಅದಕ್ಕೆ ಆತನನ್ನು ಹೇಗಾದರೂ ತನ್ನ ಪಕ್ಕ ಕೂರುವಂತೆ ಮಾಡಲು ಮಸಲತ್ತು ಮಾಡುತ್ತಿರುತ್ತಾರೆ ಎಂದು ಅಪ್ಪ ಶಿಖರ್ ಧವನ್ ಕೂಡಾ ಫೋಟೋ ಸಮೇತ ಹಾಕಿದ್ದಾರೆ. ಈಗ ಗೊತ್ತಾಯಿತಲ್ಲಾ ಟೀಂ ಇಂಡಿಯಾದ ಮೋಸ್ಟ್ ವಾಂಟೆಡ್ ಬಾಹುಬಲಿ ಯಾರು ಎಂದು?!