Select Your Language

Notifications

webdunia
webdunia
webdunia
webdunia

ಮೊದಲ ಟೆಸ್ಟ್ ಗೂ ಮೊದಲು ಕನ್ನಡಿಗ ಕೆಎಲ್ ರಾಹುಲ್ ಗೆ ಆಘಾತ

ಮೊದಲ ಟೆಸ್ಟ್ ಗೂ ಮೊದಲು ಕನ್ನಡಿಗ ಕೆಎಲ್ ರಾಹುಲ್ ಗೆ ಆಘಾತ
Colombo , ಸೋಮವಾರ, 24 ಜುಲೈ 2017 (13:19 IST)
ಕೊಲೊಂಬೋ: ನಾಳೆಯಿಂದ ಶ್ರೀಲಂಕಾ ಮತ್ತು ಭಾರತ ನಡುವೆ ಗಾಲೆಯಲ್ಲಿ ಪ್ರಥಮ ಟೆಸ್ಟ್ ಪಂದ್ಯ ನಡೆಯಲಿದೆ. ಆದರೆ ಗಾಯದಿಂದ ಮರಳಿದ ಕನ್ನಡಿಗ ಕೆಎಲ್ ರಾಹುಲ್ ಗೆ ಆಘಾತ ಸಿಕ್ಕಿದೆ.


ತೀವ್ರ ಜ್ವರದಿಂದ ಬಳಲುತ್ತಿರುವ ಕೆಎಲ್ ರಾಹುಲ್ ನಾಳೆಯ ಪಂದ್ಯದಲ್ಲಿ ಆಡುವುದಿಲ್ಲ. ತಂಡದ ಜತೆ ರಾಹುಲ್ ಗಾಲೆಗೆ ಪ್ರಯಾಣಿಸಿಲ್ಲ. ಕೊಲೊಂಬೋದಲ್ಲಿಯೇ ಉಳಿದುಕೊಂಡಿದ್ದು, ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ.

ಡೆಂಗ್ಯೂ ಅಥವಾ ನ್ಯುಮೋನಿಯಾ ಜ್ವರವಾಗಿರಬಹುದೇ ಎಂದು ತಪಾಸಣೆ ನಡೆಸಲಾಗುತ್ತಿದೆ. ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಪಂದ್ಯದ ನಂತರ ಗಾಯಗೊಂಡು ಶಸ್ತ್ರಚಿಕಿತ್ಸೆಗೊಳಗಾಗಿದ್ದ ರಾಹುಲ್ ಐಪಿಎಲ್ ನಲ್ಲೂ ಪಾಲ್ಗೊಂಡಿರಲಿಲ್ಲ. ವಿಪರ್ಯಾಸವೆಂದರೆ ಗಾಯದಿಂದ ಚೇತರಿಸಿಕೊಂಡು ಮರಳಿದ ಪಂದ್ಯದಲ್ಲೇ ಆಡಲು ಸಾಧ್ಯವಾಗದಂತಹ ಪರಿಸ್ಥಿತಿ ಅವರದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೆನ್ಸೇಷನಲ್ ಹುಡುಗಿ ಹರ್ಮನ್ ಪ್ರೀತ್ ಕೌರ್ ಗೆ ಪಂಜಾಬ್ ಸಿಎಂ ಬಂಪರ್ ಆಫರ್!