Select Your Language

Notifications

webdunia
webdunia
webdunia
webdunia

ರಾಹುಲ್ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕವನ್ನು ಸಿಡಿಸಿದ ಮೊದಲ ಭಾರತೀಯ ಆಟಗಾರ

ರಾಹುಲ್ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕವನ್ನು ಸಿಡಿಸಿದ ಮೊದಲ ಭಾರತೀಯ ಆಟಗಾರ
ಹರಾರೆ , ಭಾನುವಾರ, 12 ಜೂನ್ 2016 (18:41 IST)
ಕೆ.ಎಲ್. ರಾಹುಲ್ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕವನ್ನು ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೆ.ಎಲ್. ರಾಹುಲ್ ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು, ಹ್ಯಾಮಿಲ್ಟನ್ ಮಸ್‌ಕಾಡ್ಜಾ ಬೌಲಿಂಗ್‌ನಲ್ಲಿ  ಲಾಂಗ್‌ ಆನ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕವನ್ನು ಮುಟ್ಟಿದರು. 
 
 
ಭಾರತ ಜಿಂಬಾಬ್ವೆ ವಿರುದ್ಧ 9 ವಿಕೆಟ್‌ಗಳಿಂದ ಜಯಗಳಿಸಿತ್ತು.  ಇದಕ್ಕೆ ಮುಂಚೆ ರಾಬಿನ್ ಉತ್ತಪ್ಪಾ ಇಂಗ್ಲೆಂಡ್ ವಿರುದ್ಧ ಏಕ ದಿನ ಚೊಚ್ಚಲ ಪಂದ್ಯದಲ್ಲಿ 86 ರನ್ ಸಿಡಿಸಿದ್ದು ಅತ್ಯಧಿಕ ಸ್ಕೋರಾಗಿತ್ತು. 
 
169 ರನ್ ಬೆನ್ನಟ್ಟಿದ ಭಾರತದ ಪರ ಕರುಣ್ ನಾಯರ್ ಬೇಗನೇ ಔಟಾದ ಬಳಿಕ ರಾಹುಲ್ ಅಜೇಯ 100 ರನ್ ಗಳಿಸಿದರೆ ರಾಯುಡು ಅವರಿಗೆ ಬೆಂಬಲವಾಗಿ ನಿಂತು ಸುಭದ್ರ 62 ರನ್ ಬಾರಿಸಿದ್ದರು.
 
 ರಾಹುಲ್ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಎರಡಂಕಿ ದಾಟಲು ವಿಫಲರಾಗಿದ್ದರು. ಆದರೆ ಸಿಡ್ನಿಯಲ್ಲಿ ಸಿಕ್ಕಿದ ಇನ್ನೊಂದು ಅವಕಾಶದಲ್ಲಿ ರಾಹುಲ್ ಮೊದಲ ಟೆಸ್ಟ್ ಶತಕ ಬಾರಿಸಿದ್ದರು. 6 ತಿಂಗಳ ನಂತರ ಕೊಲಂಬೊನಲ್ಲಿ ಶ್ರೀಲಂಕಾ ವಿರುದ್ಧ ಶತಕ ಬಾರಿಸಿ ಭಾರತಕ್ಕೆ 2-1ರಿಂದ ಸರಣಿ ಜಯಕ್ಕೆ ನೆರವಾಗಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್‌ನಲ್ಲಿ ಸರಿಯಾದ ನಡವಳಿಕೆ ತೋರುವಂತೆ ವೇಗಿ ಅಮೀರ್‌ಗೆ ಪಿಸಿಬಿ ಎಚ್ಚರಿಕೆ