ಕೊಚ್ಚಿ: ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ ಅಶಿಸ್ತು ಪ್ರದರ್ಶಿಸಿದ್ದ ಕೇರಳ ಕ್ರಿಕೆಟಿಗ ಸಂಜು ಸಾಮ್ಸನ್ ಕೇರಳ ಕ್ರಿಕೆಟ್ ಅಸೋಸಿಯೇಷನ್ ನ ಕ್ಷಮೆ ಯಾಚಿಸಿದ್ದಾರೆ. ಈ ಹಿನ್ನಲೆಯಲ್ಲಿ ನಿಷೇಧದ ಭೀತಿಯಲ್ಲಿದ್ದ ಸಾಮ್ಸನ್ ಗೆ ಮಾಫಿ ಸಿಗುವ ಸಾಧ್ಯತೆಯಿದೆ.
ಸಂಜು ರಣಜಿ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಂನಲ್ಲಿ ಬ್ಯಾಟ್ ಮುರಿದು ಹಾಕಿದ್ದಲ್ಲದೆ, ಹೇಳದೇ ಕೇಳದೇ ತಂಡದಿಂದ ನಾಪತ್ತೆಯಾಗಿದ್ದರು. ಅಲ್ಲದೆ ಅವರ ತಂದೆ ಸಾಮ್ಸನ್ ಕ್ರಿಕೆಟ್ ಅಸೋಸಿಯೆಷನ್ ಅಧ್ಯಕ್ಷ ಟಿ.ಕೆ. ಮ್ಯಾಥ್ಯೂ ಮೇಲೆ ದೂರವಾಣಿ ಮೂಲಕ ವಾಗ್ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಇದರಿಂದಾಗಿ ಕ್ರಿಕೆಟ್ ಅಸೋಸಿಯೇಷನ್ ನೇಮಿಸಿದ ಶಿಸ್ತು ಸಮಿತಿ ಅವರ ವಿರುದ್ಧ ವಿಚಾರಣೆ ನಡೆಸುತ್ತಿತ್ತು. ಆದರೆ ತಮ್ಮ ಕೃತ್ಯಕ್ಕೆ ಸಂಜು ಕ್ಷಮೆಯಾಚಿಸಿದ್ದು, ಕ್ರಿಕೆಟ್ ಮಂಡಳಿ ಎಚ್ಚರಿಕೆ ನೀಡಿ ಪ್ರಕರಣ ಕೈ ಬಿಡುವ ಸಾಧ್ಯತೆ ಹೆಚ್ಚಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ