Select Your Language

Notifications

webdunia
webdunia
webdunia
webdunia

ಭಾರತ ಟೆಸ್ಟ್ ತಂಡಕ್ಕೆ ಕರುಣ್ ನಾಯರ್ ನಾಯಕತ್ವ!

ಭಾರತ ಟೆಸ್ಟ್ ತಂಡಕ್ಕೆ ಕರುಣ್ ನಾಯರ್ ನಾಯಕತ್ವ!
Mumbai , ಶುಕ್ರವಾರ, 30 ಜೂನ್ 2017 (08:45 IST)
ಮುಂಬೈ: ಅರೇ.. ಹಾಗಿದ್ದರೆ ವಿರಾಟ್ ಕೊಹ್ಲಿ ಕತೆ ಏನಾಯ್ತು? ಕುಂಬ್ಳೆ ಜತೆಗಿನ ವಿವಾದದಿಂದ ಬೇಸತ್ತು ಅವರನ್ನು ನಾಯಕ ಸ್ಥಾನದಿಂದ ಕಿತ್ತು ಹಾಕಿದರಾ ಎಂದು ಅಚ್ಚರಿಯಾಯಿತೇ?

 
ಹಾಗೇನೂ ಇಲ್ಲ. ಕನ್ನಡಿಗ ಕರುಣ್ ನಾಯರ್ ನಾಯಕರಾಗುತ್ತಿರುವುದು ಭಾರತ ಎ ತಂಡಕ್ಕೆ. ದ. ಆಪ್ರಿಕಾ ಎ ತಂಡದ ವಿರುದ್ಧ ನಡೆಯಲಿರುವ ಟೆಸ್ಟ್ ತಂಡಕ್ಕೆ ಕರುಣ್ ನಾಯರ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಸರಣಿ ಜುಲೈ 26 ರಿಂದ ನಡೆಯಲಿದೆ.

ಅದಲ್ಲದೆ ದ. ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಎ ತಂಡವನ್ನೊಳಗೊಂಡ ತ್ರಿಕೋನ ಏಕದಿನ ಸರಣಿ ನಡೆಯಲಿದ್ದು ಅದಕ್ಕೆ ಇನ್ನೊಬ್ಬ ಕನ್ನಡಿಗ ಆಟಗಾರ ಮನೀಶ್ ಪಾಂಡೆ ನಾಯಕರಾಗಲಿದ್ದಾರೆ. ವಿಶೇಷವೆಂದರೆ ಭಾರತ ಎ ತಂಡಕ್ಕೆ ಕೋಚ್ ಕೂಡಾ ಕರ್ನಾಟಕದವರೇ ಆದ ರಾಹುಲ್ ದ್ರಾವಿಡ್. ಅಂತೂ ಇದು ನಮ್ಮದೇ ತಂಡ ಎನ್ನಲಡ್ಡಿಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಗೆ ವಿಶೇಷ ಕಾರಣಕ್ಕೆ ಥ್ಯಾಂಕ್ಸ್ ಹೇಳಿದ ರವೀಂದ್ರ ಜಡೇಜಾ