Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಮೇಲೆ ಇಂಗ್ಲೆಂಡ್ ಬ್ಯಾಟ್ಸ್ ಮನ್ ಜೋ ರೂಟ್ ಗೆ ಪ್ಯಾರ್ ಆಗ್ಬಿಟೈತೆ ಅಂತೆ!

ವಿರಾಟ್ ಕೊಹ್ಲಿ ಮೇಲೆ ಇಂಗ್ಲೆಂಡ್ ಬ್ಯಾಟ್ಸ್ ಮನ್ ಜೋ ರೂಟ್ ಗೆ ಪ್ಯಾರ್ ಆಗ್ಬಿಟೈತೆ ಅಂತೆ!
Mumbai , ಗುರುವಾರ, 19 ಜನವರಿ 2017 (11:00 IST)
ಮುಂಬೈ: ಟೈಟಲ್ ನೋಡಿ ಅಪಾರ್ಥ ಮಾಡಿಕೊಳ್ಳಬೇಡ್ರೀ.. ಅಂತಹದ್ದೇನಿಲ್ಲ. ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದ್ದನ್ನು ನೋಡಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಜೋ ರೂಟ್ ಗೆ ಪ್ಯಾರ್ ಆಗ್ಬಿಟೈತೆ ಅಂತೆ.
 

ಅವರು ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ್ದು ನೋಡಿ ನಿಜಕ್ಕೂ ಅದ್ಭುತವೆನಿಸಿತು. ಅಷ್ಟು ದೊಡ್ಡ ಮೊತ್ತವನ್ನು ಅವರು ಚೇಸ್ ಮಾಡಿದ್ದು ನಿಜಕ್ಕೂ ಅಮೋಘ. ಅವರನ್ನು ನಾವು ಮೊದಲೇ ಔಟ್ ಮಾಡಬೇಕಿತ್ತು. ಯಾಕೋ ಕೈ ಗೂಡಲಿಲ್ಲ.

ಅವರ ಆಟ ನೋಡಿದ ಮೇಲೆ ಒಮ್ಮೆ ಅವರ ಜತೆ ಕುಳಿತು ಮಾತನಾಡುವಾಸೆಯಾಗಿದೆ. ಇದುವರೆಗೆ ನನಗೆ ಆ ಅವಕಾಶ ಸಿಕ್ಕಿಲ್ಲ. ಮುಂದೆ ಸಿಕ್ಕರೆ ಖಂಡಿತಾ ಬಿಡಲ್ಲ ಎಂದು ಖ್ಯಾತ ಬ್ಯಾಟಿಂಗ್ ತಾರೆ ಹೇಳಿಕೊಂಡಿದ್ದಾರೆ.  ಜಾಗತಿಕವಾಗಿ ಜೋ ಮತ್ತು ಕೊಹ್ಲಿ ನಡುವೆ ಯಾರು ಶ್ರೇಷ್ಠರು ಎಂದು ಚರ್ಚೆಯಾಗುತ್ತಿರಬೇಕಾದರೆ, ಸ್ವತಃ ರೂಟ್ ಕೊಹ್ಲಿ ಗುಣಗಾನ ಮಾಡಿರುವುದು ವಿಶೇಷ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಕಾ ಸಸ್ಯಾಹಾರಿ ಕ್ರಿಕೆಟಿಗ ಕೇದಾರ್ ಜಾದವ್ ಗೆ ಚಿಕನ್ ತಿನಿಸಿದ ಕ್ರೆಡಿಟ್ ಇವರಿಗೆ ಸಲ್ಲಬೇಕಂತೆ!