Select Your Language

Notifications

webdunia
webdunia
webdunia
webdunia

ಅಂಪಾಯರ್ ಗಳ ತಪ್ಪು ತೀರ್ಮಾನದ ವಿಚಾರದಲ್ಲಿ ಇಂಗ್ಲೆಂಡ್ ತಂಡದಲ್ಲೇ ಭಿನ್ನರಾಗ!

ಅಂಪಾಯರ್ ಗಳ ತಪ್ಪು ತೀರ್ಮಾನದ ವಿಚಾರದಲ್ಲಿ ಇಂಗ್ಲೆಂಡ್ ತಂಡದಲ್ಲೇ ಭಿನ್ನರಾಗ!
Bangalore , ಬುಧವಾರ, 1 ಫೆಬ್ರವರಿ 2017 (10:37 IST)
ಬೆಂಗಳೂರು: ದ್ವಿತೀಯ ಟಿ20 ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಅಂಪಾಯರ್ ನೀಡಿದ ತಪ್ಪು ತೀರ್ಪಿನಿಂದಾಗಿ ಸರಣಿ ಗೆಲ್ಲುವ ಅವಕಾಶ ಕೈ ತಪ್ಪಿತು ಎಂದು ಇಂಗ್ಲೆಂಡ್ ಕ್ರಿಕೆಟ್ ನಾಯಕ ಇಯಾನ್ ಮಾರ್ಗನ್ ಆರೋಪಿಸಿದ್ದರೆ, ಅವರದೇ ತಂಡದ ಪ್ರಮುಕ ಬ್ಯಾಟ್ಸ್ ಮನ್ ಜೋ ರೂಟ್ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.

 
“ನನಗೆ ಯಾವುದೇ ಪಂದ್ಯದಲ್ಲೂ ಅಂಪಾಯರ್ ಗಳಿಂದ ಸಮಸ್ಯೆ ಆಗಲಿಲ್ಲ. ನಾವು ಕೆಲವೊಮ್ಮೆ ತಪ್ಪು ಮಾಡುತ್ತೇವೆ. ಹಾಗೇ ಅವರೂ ಮನುಷ್ಯರೇ. ಕೆಲವೊಮ್ಮೆ ತಪ್ಪುಗಳಾಗುವುದು ಸಹಜ. ಅದಕ್ಕೆ ಅವರನ್ನು ಹೊಣೆ ಮಾಡುವುದು ಸರಿಯಲ್ಲ” ಎಂದು ಚಿನ್ನಸ್ವಾಮಿ ಮೈದಾನದಲ್ಲಿ ರೂಟ್ ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ಮೊನ್ನೆ ನಡೆದಿದ್ದು ಸೆಮಿಫೈನಲ್ ಪಂದ್ಯವೇನೂ ಅಲ್ಲ. ಸೆಮಿಫೈನಲ್ ಪಂದ್ಯವಾಗಿದ್ದರೆ, ಅಲ್ಲಿಗೆ ನಮ್ಮ ಟೂರ್ನಮೆಂಟ್ ನಲ್ಲಿ ನಮ್ಮ ಅವಕಾಶ ಮುಗಿಯಿತು ಎಂದು ನಿರಾಶರಾಗಬೇಕಿತ್ತು. ಆದರೆ ಹಾಗೇನೂ ಅಲ್ಲವಲ್ಲ. ಮತ್ತೆ ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ರೂಟ್ ಪ್ರಶ್ನಿಸಿದ್ದಾರೆ.

ಆ ಪಂದ್ಯದಲ್ಲಿ ಬುಮ್ರಾ ಕೊನೆಯ ಓವರ್ ನ್ನು ಚೆನ್ನಾಗಿ ನಿಭಾಯಿಸಿದರು. ಆದರೆ ನಾವೀಗ ಅಂತಿಮ ಪಂದ್ಯದತ್ತ ಗಮನ ಹರಿಸಿದ್ದೇವೆ. ಕಳೆದುದರ ಬಗ್ಗೆ ಚಿಂತಿಸುತ್ತಿಲ್ಲ ಎಂದು ರೂಟ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತನ್ನದೇ ದೇಶವನ್ನು ಕ್ರೀಡೆಗೆ ನಾಲಾಯಕ್ಕು ಎಂದು ವಿವಾದಕ್ಕೀಡಾದ ಪಾಕಿಸ್ತಾನಿ ಕಾಮೆಂಟೇಟರ್ ರಮೀಜ್ ರಾಜಾ