ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸುವಾಗ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ರೋಹಿತ್ ಶರ್ಮಾರನ್ನು ಕೈ ಬಿಡಲಾಗಿತ್ತು.
ಸತತ ಪಂದ್ಯಗಳಿಂದ ಬಳಲಿದ್ದಕ್ಕೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿತ್ತು. ಹಾಗಿದ್ದರೆ ಬುಮ್ರಾ ಪೂರ್ಣ ಪ್ರಮಾಣದಲ್ಲಿ ಫಿಟ್ ಆಗಿಲ್ಲವೇ? ಆ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ.
ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ. ಹಾಗಿದ್ದಾಗಿಯೂ ವಿಶ್ರಾಂತಿ ಪಡೆಯಲು ಆಯ್ಕೆಗಾರರು ಮತ್ತು ತಂಡದ ಮ್ಯಾನೇಜ್ ಮೆಂಟ್ ನನಗೆ ಸೂಚಿಸಿದೆ ಎಂದು ಬುಮ್ರಾ ಹೇಳಿದ್ದಾರೆ. ಹಾಗಿದ್ದರೆ ತಂಡದಿಂದ ಹೊರಗುಳಿದಿದ್ದಕ್ಕೆ ಬುಮ್ರಾಗೆ ಬೇಸರವಾಗಿದೆಯೇ? ಎಂದು ಕೇಳಿದಾಗ, ಹಾಗೇನೂ ಇಲ್ಲ, ಅವರೇನು ಹೇಳುತ್ತಾರೋ ಅದನ್ನು ಮಾಡುವುದೇ ನನ್ನ ಕೆಲಸ ಎಂದುತ್ತರಿಸಿದ್ದಾರೆ.