Select Your Language

Notifications

webdunia
webdunia
webdunia
webdunia

ಆರ್‌ಸಿಬಿಯ ಯಶಸ್ಸಿನ ತಿರುವಿನಲ್ಲಿ ಬೌಲರುಗಳದ್ದೂ ಪಾತ್ರವಿದೆ: ಯಜುವೇಂದ್ರ ಚಾಹಲ್

ಆರ್‌ಸಿಬಿಯ ಯಶಸ್ಸಿನ ತಿರುವಿನಲ್ಲಿ ಬೌಲರುಗಳದ್ದೂ ಪಾತ್ರವಿದೆ: ಯಜುವೇಂದ್ರ ಚಾಹಲ್
ಬೆಂಗಳೂರು: , ಗುರುವಾರ, 19 ಮೇ 2016 (13:41 IST)
ರಾಯಲ್ ಚಾಲೆಂಜರ್ಸ್  ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದು, ಕೊಹ್ಲಿ ಸತತ ದಾಖಲೆಗಳನ್ನು ಮುರಿದು ಬೆಂಗಳೂರು ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟಿದ್ದಾರೆ. ಆದರೆ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ತಮ್ಮ ತಂಡದ ಬೌಲರುಗಳು ಕೂಡ ತಂಡ ತಿರುವು ತೆಗೆದುಕೊಳ್ಳುವುದಕ್ಕೆ ನಿರ್ಣಾಯಕ ಪಾತ್ರ ವಹಿಸಿದ್ದಾರೆಂದು ಹೇಳಿದ್ದಾರೆ. 
 
 
ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಲು ಆರ್‌ಸಿಬಿ ಬೌಲರುಗಳು ಸಣ್ಣ ಪಾತ್ರವೇನೂ ವಹಿಸಿಲ್ಲ. ವಿಶೇಷವಾಗಿ ಕ್ರಿಸ್ ಜೋರ್ಡಾನ್ ತಂಡಕ್ಕೆ ಸೇರ್ಪಡೆಯಾದ ಮೇಲೆ ಬೌಲರುಗಳು ಮಿಂಚಿದ್ದಾರೆಂದು ಚಾಹಲ್ ಹೇಳಿದರು. 
 
 ಕಳೆದ ಎರಡು ಪಂದ್ಯಗಳಲ್ಲಿ ಬೌಲರುಗಳು ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಮುಂಚಿನ ಪಂದ್ಯಗಳಲ್ಲಿ ಬೌಲಿಂಗ್ ಕಳವಳಕಾರಿಯಾಗಿದ್ದು, ಸಂಯೋಜನೆ ಸಮಸ್ಯೆ ಕೂಡ ಎದುರಿಸುತ್ತಿದ್ದೆವು. ಈಗ ಸಂಯೋಜನೆ ಸರಿಯಾಗಿದ್ದು, ನಮ್ಮ ಬೌಲಿಂಗ್ ಸುಧಾರಿಸಿಕೊಂಡಿದ್ದೇವೆ. ದುರ್ಬಲ ಬೌಲಿಂಗ್ ಲೈನ್ ಅಪ್ ಎಂಬ ಹಣೆ ಪಟ್ಟಿಯನ್ನು ಕೂಡ ಅಳಿಸಿಹಾಕಿದ್ದೇವೆ ಎಂದು ಪಂದ್ಯದ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ಚಾಹಲ್ ಹೇಳಿದರು. 
 
ಜೋರ್ಡಾನ್ ತಂಡಕ್ಕೆ ಸೇರ್ಪಡೆಯಾದಾಗ, ಮೊದಲ ಎರಡು ಪಂದ್ಯಗಳಲ್ಲಿ ಯಶಸ್ಸು ಸಿಗಲಿಲ್ಲ. ಮೊಹಾಲಿಯಲ್ಲಿ ಮತ್ತು ಕೆಕೆಆರ್ ವಿರುದ್ಧ ಬೌಲಿಂಗ್ ಮಾಡಿದ ರೀತಿಯಿಂದ ತಂಡಕ್ಕೆ ನೆರವಾಯಿತು ಎಂದು ಚಾಹಲ್ ಹೇಳಿದರು. 
 
ಐಪಿಎಲ್‌ನಲ್ಲಿ ಕೊಹ್ಲಿ ಯಶಸ್ಸಿನ ರಹಸ್ಯವೇನು ಎಂಬ ಪ್ರಶ್ನೆಗೆ, ಕೊಹ್ಲಿ ತಮ್ಮ ಫಿಟ್ನೆಸ್ ಕುರಿತು ಹೆಚ್ಚು ಗಮನಹರಿಸುತ್ತಾರೆ ಮತ್ತು ಜಿಮ್‌ನಲ್ಲಿ ಮತ್ತು ನೆಟ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಬ್ಯಾಟಿಂಗ್ ಬಳಿಕ ಅವರು ಸಿಕ್ಸರುಗಳನ್ನು ಸಿಡಿಸಲು ಸೆಂಟರ್ ವಿಕೆಟ್ ಅಭ್ಯಾಸ ಮಾಡುತ್ತಾರೆ. ಅವರು ಶ್ರಮಪಟ್ಟು ಅಭ್ಯಾಸ ಮಾಡಿದ್ದರಿಂದ ಐಪಿಎಲ್‌ನಲ್ಲಿ 400ಕ್ಕಿಂತ ಹೆಚ್ಚು ರನ್ ಸಿಡಿಸಿದ್ದಾರೆ ಎಂದು ಚಾಹಲ್ ಹೇಳಿದರು. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಸಿಡಿಲಬ್ಬರದ ಶತಕ: ರಾಯಲ್ ಚಾಲೆಂಜರ್ಸ್‌ಗೆ ಕಿಂಗ್ಸ್ ಇಲೆವನ್ ವಿರುದ್ಧ ಗೆಲುವು