Select Your Language

Notifications

webdunia
webdunia
webdunia
webdunia

ಪಂದ್ಯ ಸೋತರೂ ಹೃದಯ ಗೆದ್ದ ಭಾರತ ಮಹಿಳೆಯರು

ಪಂದ್ಯ ಸೋತರೂ ಹೃದಯ ಗೆದ್ದ ಭಾರತ ಮಹಿಳೆಯರು
London , ಸೋಮವಾರ, 24 ಜುಲೈ 2017 (09:25 IST)
ಲಂಡನ್: ವಿಶ್ವಕಪ್ ಫೈನಲ್ ನಂತಹ ಪಂದ್ಯದಲ್ಲಿ ಒತ್ತಡ ನಿಭಾಯಿಸುವುದನ್ನು ಕಲಿತರಷ್ಟೇ ಗೆಲ್ಲಲು ಸಾಧ್ಯ.  ಅದು ಸಾಧ್ಯವಾಗದೇ ಭಾರತ ವನಿತೆಯರು ವಿಶ್ವಕಪ್ ಸೋತರು. ಆದರೂ ಹೃದಯ ಗೆಲ್ಲಲು ಯಶಸ್ವಿಯಾದರು.


ಯಾರೂ ನಿರೀಕ್ಷಿಸಿಯೇ ಇರದ ತಂಡವೊಂದು ಫೈನಲ್ ವರೆಗೆ ತಲುಪಿ, ಪ್ರಬಲ ತಂಡಕ್ಕೆ ಇಷ್ಟು ಪೈಪೋಟಿ ನೀಡಿದ್ದಕ್ಕೆ ವಿಶ್ವದಾದ್ಯಂತ ಕೊಂಡಾಡಲಾಗುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಕ್ರಿಕೆಟ್ ಜಗತ್ತಿನ ದಿಗ್ಗಜರು, ಸಿನಿಮಾ ಕಲಾವಿದರು, ಅಭಿಮಾನಿಗಳು ಭಾರತ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೀವು ದೇಶದ ಎಲ್ಲಾ ಮಹಿಳೆಯರಿಗೂ ಸ್ಪೂರ್ತಿ ನೀಡಿದ್ದೀರಿ. ನೀವು ಆಡಿದ ರೀತಿ ನಮಗೆ ಹೆಮ್ಮೆಯಾಗಿದೆ ಎಂದು ಕೊಂಡಾಡಿರುವ ಪ್ರಧಾನಿ ಮೋದಿ ಕನ್ನಡತಿ ರಾಜೇಶ್ವರಿ ಗಾಯಕ್ ವಾಡ್ ಮತ್ತು ಪೂನಂ ಯಾದವ್ ಬೌಲಿಂಗ್ ನ್ನು ವಿಶೇಷವಾಗಿ ಕೊಂಡಾಡಿದ್ದಾರೆ.

ಅತ್ತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡಾ ಸೋಲು ನಿರಾಸೆ ತಂದಿದೆ ಆದರೂ ನೀವು ಆಡಿದ ರೀತಿಗೆ ನಮ್ಮ ಸಲಾಂ ಎಂದಿದ್ದಾರೆ. ವೀರೇಂದ್ರ ಸೆಹ್ವಾಗ್,  ಅನಿಲ್ ಕುಂಬ್ಳೆ ಸೇರಿದಂತೆ ಕ್ರಿಕೆಟ್ ಜಗತ್ತಿನ ಅನೇಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅತ್ತ ಅಭಿಮಾನಿಗಳೂ ಸೋತರೂ ನೀವು ಆಡಿದ ರೀತಿಗೆ, ಭಾರತ ಕ್ರಿಕೆಟ್ ನಲ್ಲಿ ಹೊಸದೊಂದು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಕ್ಕೆ ಮಹಿಳೆಯರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಮಹಿಳಾ ವಿಶ್ವಕಪ್ ಮುಡಿಗೇರಿಸಿಕೊಂಡ ಇಂಗ್ಲೆಂಡ್