Publish Date: Sun, 05 Feb 2017 (07:16 IST)
Updated Date: Sun, 05 Feb 2017 (07:19 IST)
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಸಂಬಂಧ ಸರಿಯಿಲ್ಲ. ಕ್ರಿಕೆಟಿಗರೂ ಮೈದಾನದಲ್ಲಿ ಚಕಮಕಿ ನಡೆಸಿದ ಹಲವು ಉದಾಹರಣೆಗಳಿವೆ. ಶಾಹಿದ್ ಅಫ್ರಿದಿ ಮತ್ತು ಹರ್ಭಜನ್ ಸಿಂಗ್ ಕೂಡಾ ಇದಕ್ಕೆ ಹೊರತಲ್ಲ. ಆದರೂ ಭಜಿ ನೀಡಿದ ಈ ಸಂದೇಶ ನಿಜಕ್ಕೂ ಭಾರತೀಯರ ಹೃದಯ ವೈಶಾಲ್ಯತೆಗೆ ಸಾಕ್ಷಿ.
ಇವರಿಬ್ಬರೂ ಕ್ರಿಕೆಟ್ ಫೀಲ್ಡ್ ನಲ್ಲಿ ಕೆಲವು ಬಾರಿ ಕೋಳಿ ಜಗಳವಾಡಿದ್ದುಂಟು. ಆದರೂ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಆಡಲಿರುವ ಅಫ್ರಿದಿಗೆ ಭಜಿ ಗುಡ್ ಲಕ್ ಮೆಸೇಜ್ ಮಾಡಿದ್ದಾರೆ. ಸದ್ಯಕ್ಕೆ ಇಬ್ಬರೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡವರೇ. ಹೀಗಾಗಿ ಸಮಾನ ಮನಸ್ಥಿತಿಯ ಭಜಿ ಪಾಕ್ ಆಟಗಾರನಿಗೆ ಶುಭ ಹಾರೈಸಿದ್ದಾರೆ.
ಅಂದ ಹಾಗೆ ಪಾಕ್ ಆಟಗಾರರೊಂದಿಗೆ ಭಜಿ ಸ್ನೇಹ ಹೊಸದೇನಲ್ಲ. ಶೊಯೇಬ್ ಅಖ್ತರ್ ಜತೆಗೂ ಸ್ನೇಹ ಸಂಬಂಧ ಹೊಂದಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಇವರು ಜತೆಗೆ ಕಾಣಿಸಿಕೊಂಡಿದ್ದು ಇದೆ. ಆದರೆ ಅಫ್ರಿದಿಗೆ ವಿಡಿಯೋ ಸಂದೇಶ ನೀಡಿರುವುದು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹಿಟ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ