Select Your Language

Notifications

webdunia
webdunia
webdunia
webdunia

ಇದು ನನಗಿನ್ನೊಂದು ತವರು ಮನೆ: ಭಾರತದ ಮೇಲಿನ ಪ್ರೀತಿ ಬಿಚ್ಟಿಟ್ಟ ಮೆಗ್ರಾಥ್

ಇದು ನನಗಿನ್ನೊಂದು ತವರು ಮನೆ: ಭಾರತದ ಮೇಲಿನ ಪ್ರೀತಿ ಬಿಚ್ಟಿಟ್ಟ ಮೆಗ್ರಾಥ್
ನವದೆಹಲಿ , ಶನಿವಾರ, 10 ಸೆಪ್ಟಂಬರ್ 2016 (17:06 IST)
ಆಸ್ಟ್ರೇಲಿಯಾದ ಮಾಜಿ ಬೌಲರ್ ಗ್ಲೇನ್ ಮೆಗ್ರಾಥ್ ಭಾರತಕ್ಕೆ ಬರುವುದನ್ನು ಬಹಳ ಇಷ್ಟಪಡುತ್ತಾರೆ. ಮೂರು ಬಾರಿ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ಈ ಅಪ್ರತಿಮ ಬೌಲರ್ ವರ್ಷಕ್ಕೆ ಭಾರತ ನನ್ನ ಇನ್ನೊಂದು ತವರಂತೆ, ವರ್ಷಕ್ಕೆ ಮೂರು ಸಲ ಇಲ್ಲಿಗೆ ಭೇಟಿ ನೀಡುತ್ತೇನೆ ಎನ್ನುತ್ತಾರೆ. 
ಹಾರ್ಡಿ ವೈನ್ಸ್ ಬ್ರಾಂಡ್ ರಾಯಭಾರಿಯಾಗಿ ಇತ್ತೀಚಿಗೆ ರಾಜಧಾನಿಗೆ ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನ್ನಾಡುತ್ತ,
ಹೆಚ್ಚಿನ ಸಂದರ್ಭಗಳಲ್ಲಿ ನಾನು ವಿಶ್ವದಾದ್ಯಂತ ವೇಗದ ಬೌಲರ್‌ಗಳಿಗೆ ತರಬೇತಿ ನೀಡಲು ಓಡಾಡುತ್ತಿರುತ್ತೇನೆ. ಬೌಲರ್ ಆಗುವ ಕನಸನ್ನು ಹೊತ್ತ ಯುವಕರೊಂದಿಗೆ ಅಕಾಡೆಮಿಯಲ್ಲಿ ಕಳೆಯುವ ಸಮಯ ಅತ್ಯಂತ ಅಮೂಲ್ಯವಾದದ್ದು. ಇಲ್ಲಿ ಹಲವು ಮಹಾನ್ ಪ್ರತಿಭೆಗಳು ಉದಯವಾಗುತ್ತಿವೆ ಎಂದು ಹೇಳಿದ್ದಾರೆ. 
 
ಈ ದೇಶವೂ ಕೂಡ ತನ್ನ ತವರು ಮನೆ. 1992ರಿಂದ ನಾನು ಪ್ರತಿ ವರ್ಷ ಭಾರತಕ್ಕೆ ಬರುತ್ತಿದ್ದೇನೆ ಅನ್ನಿಸುತ್ತದೆ. ಮತ್ತೀಗ ವರ್ಷಕ್ಕೆ ಮೂರು ಬಾರಿ ಇಲ್ಲಿಗೆ ಬರುತ್ತೇನೆ. ಇಲ್ಲಿನ ಜನರು ಆದರದಿಂದ ಸ್ವಾಗತಿಸುತ್ತಾರೆ. ಪ್ರತಿ ಸಲ ಇಲ್ಲಿಗೆ ಬಂದಾಗಲೂ ನನ್ನನ್ನು ಭೇಟಿಯಾಗಲು ಜನರು ಕಾತರಿಸುತ್ತಿರುವುದನ್ನು ನೋಡುತ್ತೇನೆ.ಇದೇ ವಾಸ್ತವಿಕ ಸಂಗತಿ. ದಾರಿಯಲ್ಲಿ ವಾಕ್ ಹೋಗುವ ಹಾಗೂ ಇಲ್ಲ. ಆಸ್ಟ್ರೇಲಿಯಾದಲ್ಲಿ ನಾನು ಸಾಮಾನ್ಯ ವ್ಯಕ್ತಿಯಾಗಿರಬಲ್ಲೆ. ಆದರೆ ಇಲ್ಲಿ ಅದು ಸಾಧ್ಯವಿಲ್ಲ ಅಸಾಮಾನ್ಯ ವೇಗದ ಬೌಲರ್.
 
ಇದು ವೈವಿಧ್ಯಮಯ ದೇಶ. ನಾವು ಭಾರತ ಹೊಂದಿರುವಂತಹ ಇತಿಹಾಸ ಹೊಂದಿಲ್ಲ. ಕ್ರಿಕೆಟ್ ವಿಷಯಕ್ಕೆ ಬಂದಾಗ, ಭಾರತೀಯರು ಹೊಂದಿರುವ ಒಲವು ಬೇರೆ ಯಾವುದೇ ದೇಶದಲ್ಲೂ ಇರಲಾರದು ಎನ್ನಿಸುತ್ತದೆ. ಹೀಗಾಗಿ ಮಾಜಿ ಅಂತರಾಷ್ಟ್ರೀಯ ಕ್ರಿಕೆಟಿಗರು ಐಪಿಎಲ್, ಕೋಚಿಂಗ್ ಮತ್ತು ವೀಕ್ಷಕ ವಿವರಣೆಗಾರರಾಗಿ ಹಣ ಸಂಪಾದಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಸ್ ಗೇಲ್ ಅವರಿಗೂ ಭಾರತ ಇನ್ನೊಂದು ತವರಂತೆ