ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ ಕಿವೀಸ್ ವಿರುದ್ಧದ ಮೂರನೆಯ ಟೆಸ್ಟ್‌ನ ಪ್ರಥಮ ಇನ್ನಿಂಗ್ಸ್‌ನಲ್ಲಿ ಭಾರತ 258 ರನ್‌ಗಳ ಭಾರಿ ಮುನ್ನಡೆ ಸಾಧಿಸಿದೆ. ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಮಾರಕ ಬೌಲಿಂಗ್‌ಗೆ ತತ್ತರಿಸಿದ ಕಿವೀಸ್ ದಾಂಡಿಗರು ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ಮರಳಿದರು.
299 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿರುವ ನ್ಯೂಜಿಲೆಂಡ್ ಫಾಲೋ ಆನ್‌ಗೆ ಭೀತಿಗೆ ಒಳಗಾಗಿತ್ತು.
ಕಿವೀಸ್ ಪರ ಮಾಕ್ಟಿನ್ ಗಪ್ಟಿಲ್ ಭಾರತದ ಬೌಲರ್‌ಗಳಿಗೆ ಉತ್ತಮ ಪ್ರತಿರೋದ ಒಡ್ಡಿದರಾದರೂ ರನೌಟ್ ಆಗಿ ಮರಳಿದರು( 72ರನ್-145ಎಸೆತ) . ಟಾಮ್ ಲಾಥಮ್ (53) ಮತ್ತು ಜೇಮ್ಸ್ ನಿಶಮ್ (71) ಬಿಟ್ಟರೆ ಕಿವೀಸ್ ತಂಡದ ಮತ್ಯಾರೂ ಕೂಡ ಪರಿಣಾಮಕಾರಿಯಾಗಿರಲಿಲ್ಲ.
ಮೂರನೇ ಟೆಸ್ಟ್ ಪ್ರಥಮ ಇನ್ನಿಂಗ್ಸ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರ ದಾಖಲೆಯ ಜೊತೆಯಾಟದ ಸಹಾಯದಿಂದ ಭಾರಿ ಮೊತ್ತ ದಾಖಲಿಸಿದ್ದ ಭಾರತ 557 ಕ್ಕೆ 5 ಡಿಕ್ಲೇರ್ ಮಾಡಿಕೊಂಡಿತ್ತು.
ಬಳಿಕ ಬ್ಯಾಟಿಂಗ್‌ಗಿಳಿದ ಕಿವೀಸ್ 300ರ ಗಡಿ ದಾಟುವ ಮೊದಲೇ ತನ್ನೆಲ್ಲ ವಿಕೆಟ್ ಕಳೆದುಕೊಂಡಿದೆ.
ರವಿಚಂದ್ರನ್ ಅಶ್ವಿನ್ 6 ವಿಕೆಟ್ ಕಬಳಿಸಿದರೆ, ರವಿಂದ್ರ ಜಡೇಜಾ 2 ವಿಕೆಟ್ ತನ್ನದಾಗಿಸಿಕೊಂಡರು.
ಸರಣಿಯನ್ನು ಸಂಪೂರ್ಣವಾಗಿ ವಶ ಮಾಡಿಕೊಳ್ಳುವತ್ತ ದಾಪುಗಾಲು ಹಾಕುತ್ತಿರುವ ಭಾರತ ಎರಡನೆಯ ಇನ್ನಿಂಗ್ಸ್ ಆರಂಭಿಸಿದ್ದು ಗೌತಮ್ ಗಂಭೀರ್ ಮತ್ತು ಮುರಳಿ ವಿಜಯ್ ಬ್ಯಾಟಿಂಗ್‌ಗಿಳಿದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ