Select Your Language

Notifications

webdunia
webdunia
webdunia
webdunia

ಅಗ್ರಸ್ಥಾನಕ್ಕೇರಲು ಭಾರತಕ್ಕೆ ಒಂದೇ ಹೆಜ್ಜೆ ಬಾಕಿ

ಅಗ್ರಸ್ಥಾನಕ್ಕೇರಲು ಭಾರತಕ್ಕೆ ಒಂದೇ ಹೆಜ್ಜೆ ಬಾಕಿ
ನವದೆಹಲಿ , ಬುಧವಾರ, 28 ಸೆಪ್ಟಂಬರ್ 2016 (09:29 IST)
5 ವರ್ಷಗಳ ಬಳಿಕ ಟೆಸ್ಟ್ ವಿಭಾಗದಲ್ಲಿ ನಂಬರ್ 1 ಪಟ್ಟಕ್ಕೇರುವ ಸುವರ್ಣ ಅವಕಾಶ ಕೊಹ್ಲಿ ಪಡೆಗೆ ಒದಗಿದ ಬಂದಿದೆ. ಕಿವೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯನ್ನು 2-0 ಅಂತರರಿಂದ ಗೆದ್ದರೆ ಭಾರತ ವೈಟ್ ಜರ್ಸಿಯಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ ನಂಬರ್ 1 ಪಟ್ಟಕ್ಕೆ ಲಗ್ಗೆ ಇಡಲಿದೆ. 
ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಈಗಾಗಲೇ 1-0 ಯಿಂದ ಮುಂದಿದೆ. ನಾಡಿದ್ದು ಕ್ರಿಕೆಟ್ ಕಾಶಿ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನ ಭಾರತದ ನಂಬರ್ 1 ಸ್ಥಾನವನ್ನು ನಿರ್ಧರಿಸಲಿದೆ. 
 
ಮೊದಲ ಸ್ಥಾನಿ ಪಾಕ್‌ಗಿಂತ (111) ಭಾರತ ಕೇವಲ ಒಂದು ಅಂಕ ಹಿಂದಿದ್ದು ( 110) ಕೊಹ್ಲಿ ತನ್ನ ಸಾಂಪ್ರದಾಯಿಕ ಎದುರಾಳಿಯನ್ನು ಹಿಂದಿಕ್ಕಿ ತಂಡವನ್ನು ಅಗ್ರ ಸ್ಥಾನಕ್ಕೇರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. 
 
ನಂಬರ್ 1 ಸ್ಥಾನವನ್ನು ಕಾಪಾಡಿಕೊಳ್ಳಲು ಪಾಕ್ ಹಾದಿ ಬಹಳ ಕಠಿಣವಾಗಿದೆ. ಅಗ್ರ ಸ್ಥಾನದಲ್ಲಿ ಮುಂದುವರೆಯಲು ಅದು ಮುಂಬರುವ ಸರಣಿಯಲ್ಲಿ ವಿಂಡೀಸ್ ತಂಡವನ್ನು ವೈಟ್ ವಾಶ್ ಮಾಡಬೇಕು.
 
ಅಶ್ವಿನ್ ನಂಬರ್ 2: ಕಿವೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರವಿಚಂದ್ರನ್ ಅಶ್ವಿನ್ ಐಸಿಸಿ ಟೆಸ್ಟ್ ಬೌಲರ್ ವಿಭಾಗದಲ್ಲಿ ಎರಡನೆಯ ಸ್ಥಾನಕ್ಕೇರಿದ್ದಾರೆ. ಇದೇ ರೀತಿಯ ಪ್ರದರ್ಶನವನ್ನು ಮುಂದುವರೆಸಿದರೆ ಅವರು ಕೂಡ ನಂಬರ್ 1 ಸ್ಥಾನಕ್ಕೆ ಲಗ್ಗೆ ಇಡಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ವರ್ಷದ ಬಳಿಕ ತಂಡಕ್ಕೆ ಮರಳಿದ ಗಂಭೀರ್