Select Your Language

Notifications

webdunia
webdunia
webdunia
webdunia

ಮೈದಾನದಲ್ಲಿದ್ದಾಗ ಶೇ. 120ರಷ್ಟು ಪ್ರದರ್ಶನಕ್ಕೆ ಯತ್ನಿಸುವೆ: ವಿರಾಟ್ ಕೊಹ್ಲಿ

ಮೈದಾನದಲ್ಲಿದ್ದಾಗ ಶೇ. 120ರಷ್ಟು ಪ್ರದರ್ಶನಕ್ಕೆ ಯತ್ನಿಸುವೆ: ವಿರಾಟ್ ಕೊಹ್ಲಿ
ನವದೆಹಲಿ , ಬುಧವಾರ, 8 ಜೂನ್ 2016 (12:53 IST)
ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಜೀವನದ ಅತ್ಯುತ್ತಮ ಫಾರಂನಲ್ಲಿದ್ದು, ತಾವು ಮೈದಾನದಲ್ಲಿದ್ದಾಗ ಶ್ರೇಷ್ಟ ಪ್ರದರ್ಶನ ನೀಡಬೇಕೆಂದು ಸದಾ ಯತ್ನಿಸುವುದರಿಂದ ಬಹುಶಃ ಈ ವರ್ಷದ ಅಪಾರ ಯಶಸ್ಸಿಗೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.
 
ತಾವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಿಂತಿರುಗಿದಾಗ ತಮ್ಮ ಫಾರಂ ಇದೇ ರೀತಿ ಇರುತ್ತದೆಯೇ ಎಂದು ಕಾದು ನೋಡುವುದಾಗಿ ಕೊಹ್ಲಿ ಸಮಾರಂಭವೊಂದರ ನೇಪಥ್ಯದಲ್ಲಿ ಮಾತನಾಡುತ್ತಾ ತಿಳಿಸಿದರು. 

ನಾನು ಸ್ಪರ್ಧಾತ್ಮಕ ಕ್ರಿಕೆಟ್‌‍ಗೆ ಹಿಂತಿರುಗಿದಾಗ ನನ್ನ ಆಟದ ಸ್ವರೂಪವೇನು ಎಂದು ಕಂಡುಕೊಳ್ಳಲು ನಾನು ಕಾಯುತ್ತಿದ್ದೇನೆ. ನಾನು ಮೈದಾನದಲ್ಲಿದ್ದಾಗ ಶೇ. 120 ಪ್ರದರ್ಶನ ನೀಡುವುದು ನನ್ನ ಗುರಿ. ಆದರೆ ಫಲಿತಾಂಶ ನಮ್ಮ ಕೈಯಲ್ಲಿರುವುದಿಲ್ಲ ಎಂದು ಕೊಹ್ಲಿ ಹೇಳಿದರು. ಇತ್ತೀಚೆಗೆ ಮುಗಿದ ಐಪಿಎಲ್ 2016ರಲ್ಲಿ ಕೊಹ್ಲಿ 943 ರನ್ ಕಲೆಹಾಕಿದ್ದು, ಅತೀ ಹೆಚ್ಚು ರನ್ ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 
 
ಕೊಹ್ಲಿಗೆ ಇನ್ನೂ ಕೆಲವು ಪ್ರಮುಖ ಆಟಗಾರರ ಜತೆ ಜಿಂಬಾಬ್ವೆ ಸರಣಿಗೆ ವಿಶ್ರಾಂತಿ ನೀಡಲಾಗಿದ್ದು, ಎಂ.ಎಸ್. ಧೋನಿ ಜಿಂಬಾಬ್ವೆ ಸರಣಿಯನ್ನು ಮುನ್ನಡೆಸಲಿದ್ದಾರೆ. ಸೀಮಿತ ಓವರುಗಳ ಸರಣಿ ಬಳಿಕ ಭಾರತ ಜುಲೈ 6ರಿಂದ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಂಬಾಬ್ವೆ ಸರಣಿಯನ್ನು ಸವಾಲಾಗಿ ಸ್ವೀಕರಿಸಿರುವ ಧೋನಿ