Publish Date: Tue, 14 Feb 2017 (12:37 IST)
Updated Date: Tue, 14 Feb 2017 (12:39 IST)
ಮುಂಬೈ: ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಹಾಟ್ ಫೇವರಿಟ್ ಹುಡುಗ ಎಂದರೆ ಹಾರ್ದಿಕ್ ಪಾಂಡ್ಯ ಕೂಡಾ ಒಬ್ಬರು. ಆದರೆ ಇಂತಿಪ್ಪ ಹಾರ್ದಿಕ್ ಜಂಟಿಯಾಗಿಲ್ಲವಂತೆ. ಇನ್ನೂ ಒಂಟಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
“ನೋಡಿ ನಾನಿನ್ನೂ ಒಂಟಿಯಾಗಿದ್ದೇನೆ. ನನಗೆ ಯಾರೂ ಗರ್ಲ್ ಫ್ರೆಂಡ್ ಇಲ್ಲ. ಈ ಬಗ್ಗೆ ಸುಮ್ಮನೇ ಗಾಸಿಪ್ ಹಬ್ಬಿಸಬೇಡಿ. ನಾನು ಸದ್ಯಕ್ಕೆ ನನ್ನ ಆಟದ ಬಗೆಗಷ್ಟೇ ಗಮನ ಹರಿಸಿದ್ದೇನೆ. ಹಾಗಾಗಿ ನನ್ನ ಬಗ್ಗೆ ರೂಮರ್ ಹಬ್ಬಿಸುವುದನ್ನು ನಿಲ್ಲಿಸಿದರೆ ಒಳ್ಳೆಯದು” ಎಂದು ಪ್ರೇಮಿಗಳ ದಿನಾಚರಣೆಯಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ಪಾಂಡ್ಯ ಕಳೆದ ವರ್ಷ ಲೀಶಾ ಪಾಂಡೆ ಎಂಬ ಮಾಡೆಲ್ ಜತೆ ಮರ ಸುತ್ತುತ್ತಿದ್ದರು. ಹಾಂಗ್ ಕಾಂಗ್ ನಲ್ಲಿ ರಜಾ ಮಜಾ ಮಾಡಿ ಬಂದಿದ್ದರು ಎನ್ನಲಾಗಿತ್ತು. ಆದರೆ ಸದ್ಯಕ್ಕೆ ಯಾವುದೇ ರಿಲೇಷನ್ ಶಿಪ್ ನಲ್ಲಿ ತಾನಿಲ್ಲ ಎಂದು ಪಾಂಡ್ಯ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ