Select Your Language

Notifications

webdunia
webdunia
webdunia
webdunia

ಜೀವಂತವಿರುವುದೇ ದೊಡ್ಡ ವಿಷಯ ಎಂದ ಯುವರಾಜ್ ಸಿಂಗ್

ಜೀವಂತವಿರುವುದೇ ದೊಡ್ಡ ವಿಷಯ ಎಂದ ಯುವರಾಜ್ ಸಿಂಗ್
London , ಗುರುವಾರ, 15 ಜೂನ್ 2017 (11:01 IST)
ಲಂಡನ್: ಕ್ರಿಕೆಟಿಗ ಯುವರಾಜ್ ಸಿಂಗ್ ಯಾವ ಸಿನಿಮಾ ಕತೆಗೂ ಕಮ್ಮಿಯಿಲ್ಲ. ಅಷ್ಟರ ಮಟ್ಟಿಗೆ ಏಳು ಬೀಳು ಕಂಡ ಯುವಿ ಇಂದು 300 ನೇ ಪಂದ್ಯವಾಡುತ್ತಿದ್ದಾರೆ. ಇದಕ್ಕಿಂತ ದೊಡ್ಡದು ಕ್ರಿಕೆಟಿಗನಿಗೆ ಇನ್ನೇನು ಬೇಕು ಎಂದರೆ ಅವರು ಹೇಳುವುದೇ ಬೇರೆ.

 
ಏಕದಿನ ಪಂದ್ಯದಲ್ಲಿ 300 ಪಂದ್ಯವಾಡಿದ್ದೀರಿ. ಆದರೆ ಟೆಸ್ಟ್ ಮಾದರಿಯಲ್ಲಿ ಇನ್ನೂ ನಿಮ್ಮ ದಾಖಲೆಗಳು ಕಳಪೆಯಾಗಿದೆಯಲ್ಲಾ ಎಂದರೆ ಅವರು ಹೇಳುವ ಉತ್ತರ ಅರೆಕ್ಷಣ ನಿಮ್ಮ ಬಾಯಿ ಮುಚ್ಚಿಸಬಹುದು.

‘ಇಂದು ನಾನು ಜೀವಂತವಾಗಿದ್ದೇನಲ್ಲ. ನನ್ನ ಜೀವ ಮರಳಿ ಸಿಕ್ಕಿದೆಯಲ್ಲಾ? ಅದಕ್ಕಿಂತ ದೊಡ್ಡದು ಇನ್ನೇನು ಬೇಕು ನನಗೆ?’ ಎಂದು ಪ್ರಶ್ನಿಸುತ್ತಾರೆ. 2011 ರ ವಿಶ್ವಕಪ್ ಗೆಲುವಿನ ರೂವಾರಿಯಾಗಿದ್ದ ಯುವಿ ನಂತರ ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ತುತ್ತಾಗಿ ಹಲವು ದಿನ ಮೈದಾನದಿಂದ ದೂರವಿದ್ದರು.

ಅವರು ಜೀವ ಉಳಿಸಿಕೊಂಡಿದ್ದೇ ದೊಡ್ಡದು. ಸಾವಿನೊಂದಿಗೆ ಸೆಣಸಾಡಿ ಗೆದ್ದ ವೀರ ಯುವಿ. ಅದೆಷ್ಟೋ ಜನ ಕ್ಯಾನ್ಸರ್ ಪೀಡಿತರಿಗೆ ಆದರ್ಶವಾದವರು. ಆ ದಿನಗಳಿಂದ ಪಾರಾಗಿ ಮತ್ತೆ ಕಣಕ್ಕಿಳಿಯಲು ಸಾಧ್ಯವಾಗಿದ್ದೇ ದೊಡ್ಡ ಪವಾಡ ಎಂದು ಅವರು ಹೇಳಿದ್ದಾರೆ.

ನನಗೆ ನಂಬರ್ ಮುಖ್ಯವಲ್ಲ. 300 ನೇ ಪಂದ್ಯವಾಡುತ್ತಿದ್ದೇನೆಂಬುದು ನನ್ನ ಮನಸ್ಸಲ್ಲಿಲ್ಲ. ಇಂದು ತಂಡಕ್ಕಾಗಿ ಏನು ಕೊಡುಗೆ ನೀಡಬಲ್ಲೆ ಎನ್ನುವುದಷ್ಟೇ ನನ್ನ ಮನಸ್ಸಲ್ಲಿದೆ. ಎಲ್ಲಿಯವರೆಗೆ ನನಗೆ ಸಾಧ್ಯವೋ ಅಲ್ಲಿಯವರೆಗೆ ನಿವೃತ್ತನಾಗದೇ ಕ್ರಿಕೆಟ್ ಆಡುತ್ತಿರುತ್ತೇನೆ ಎಂದಿದ್ದಾರೆ ಯುವಿ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾರನ್ನೇ ಬ್ಲಾಕ್ ಮಾಡಿದ ಮಾಜಿ ಲವ್ವರ್