Webdunia - Bharat's app for daily news and videos

Install App

ಎಬಿಡಿ, ಸೈನಾ, ರಹಾನೆ, ಗಂಭೀರ್ ಒಂದೇ ಟ್ಯೂಷನ್‌ನಿಂದ ಬಂದವರೇ?: ಕಾಲೆಳೆದ ಸೆಹ್ವಾಗ್

Webdunia
ಮಂಗಳವಾರ, 6 ಸೆಪ್ಟಂಬರ್ 2016 (14:48 IST)
ಭಾನುವಾರ ಮುಂಜಾನೆ ಸೆಹ್ವಾಗ್ ಯಾವುದೇ ಬರ್ತಡೇ ಟ್ವೀಟ್ ಪ್ರಕಟಿಸಲಿಲ್ಲವಾದ್ದರಿಂದ ಆ ದಿನ ಅಭಿಮಾನಿಗಳಿಗೆ ಬಹಳ ನೀರಸಮಯವಾಗಿತ್ತು. ಆದರೆ ಕೆಲ ಹೊತ್ತಿನಲ್ಲಿ ಅವರ ಈ ಬೇಸರಕ್ಕೆ ವೀರೂ ಕೊನೆ ಹಾಡಿದರು. 

ಚೇತೋಹಾರಿ ಟ್ವೀಟ್‌ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸದ್ದು ಮಾಡುವ ಸೆಹ್ವಾಗ್ ಸಂಡೇ ಜನ್ಮದಿನದ ಹಾರೈಕೆ ಟ್ವೀಟ್ ಮಾಡಿಲ್ಲವಾದರೂ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಮತ್ತು ಮಿಸ್ಟರ್ ಟೆಲೆಂಟ್ ರೋಹಿತ್ ಶರ್ಮಾ ಅವರ ಜತೆ ಕೂಲ್ ಪಿಕ್ಚರ್ ಹಾಕಿ ಗಮನ ಸೆಳೆದರು. ಅಷ್ಟೇ ಅಲ್ಲದೆ ಒಂದೇ ಟ್ವೀಟ್‌ನಲ್ಲಿ ನಾಲ್ವರು ದಿಗ್ಗಜರ ಕಾಲೆಳೆದು ಹಾಸ್ಯ ಚಟಾಕಿ ಹಾರಿಸಿದ್ದು ಮತ್ತೂ ವಿಶಿಷ್ಟವಾಗಿತ್ತು. 
 
ಯುವರಾಜ್ ಸಿಂಗ್ ಅವರು ಶನಿವಾರ ಮುಂಬೈನಲ್ಲಿ ಆಯೋಜಿಸಿದ್ದ 'ಯಸ್ ವೀ ಕ್ಯಾನ್ ' ಎಂಬ ಕ್ಯಾನ್ಸರ್ ಚಾರಿಟಿ ಕಾರ್ಯಕ್ರಮದಲ್ಲಿ ಇತರ ಸೆಲೆಬ್ರಿಟಿಗಳ ವೀರೂ ಸಹ ಭಾಗವಹಿಸಿದ್ದರು.
 
ಕಾರ್ಯಕ್ರಮದ ಬಳಿಕ ಸೆಲೆಬ್ರಿಟಿಗಳು ಕಾರ್ಯಕ್ರಮವನ್ನು ಆಯೋಜಿಸಿದ್ದ ಯುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಟ್ವೀಟ್‌ಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿರುವ ವೀರೂ ಹೆಚ್ಚಿನ ಹಾರೈಕೆಗಳಲ್ಲಿ ವ್ಯತ್ಯಾಶವಿಲ್ಲದ್ದನ್ನು ಕಂಡುಕೊಂಡಿದ್ದಾರೆ. ಬ್ಯಾಡ್ಮಿಂಟನ್ ತಾರೆ ಸೈನಾ, ಸ್ಪೋಟಕ ಕ್ರಿಕೆಟ್ ತಾರೆ ಎಬಿಡಿ, ಗೌತಮ್ ಗಂಭೀರ್ ಮತ್ತು ರಹಾನೆ ಅವರು ಮಾಡಿದ್ದ ಅಭಿನಂದನಾ ಟ್ವೀಟ್ ಒಂದೇ ರೀತಿ ಇದ್ದುದನ್ನು ಕಂಡುಕೊಂಡು, ಇವರೆಲ್ಲ ಒಂದೇ ಟ್ಯೂಷನ್‌ನಿಂದ ಬಂದವರೇ? ಎಂದು ಕಾಲೆಳೆದಿದ್ದಾರೆ.
 
ಕಾರ್ಯಕ್ರಮದದಲ್ಲಿ ಭಾಗವಹಿಸಿದ್ದ ಗೇಲ್ ಮತ್ತು ರೋಹಿತ್ ಜತೆಗಿದ್ದ ಫೋಟೋ ಪ್ರಕಟಿಸಿರುವ ಅವರು, ನಾಲ್ಕು ಟೆಸ್ಟ್ ತ್ರಿಶತಕ ಮತ್ತು 4 ಏಕದಿನ ದ್ವಿಶತಕಗಳು ಯೂನಿವರ್ಸ್ ಬಾಸ್ ಗೇಲ್ ಜತೆಗೆ ಒಂದೇ ಚಿತ್ರದಲ್ಲಿ ಎಂದು ಮತ್ತೊಂದು ಟ್ವೀಟ್ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025 RCB vs DC: ಯಾರು ಏನಾರ ಹೇಳ್ಳಿ, ನಾವು ಒಳ್ಳೆ ಫ್ರೆಂಡ್ಸ್ ಎಂದ್ರು ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ video

Gautam Gambhir: ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮರ್ಡರ್ ಮಾಡುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿ ಯಾರೆಂದು ಕೊನೆಗೂ ಪತ್ತೆ

IPL 2025 RCB vs DC: ಕೆಎಲ್ ರಾಹುಲ್ ನೋಡ್ಕೋ ಈವತ್ತು ನಮ್ಮ ಕಿಂಗ್ ಕೊಹ್ಲಿ ತಾಕತ್ತು

Pahalgam Attack, ಪಾಕ್‌ ಜತೆಗಿನ ಎಲ್ಲ ಕ್ರಿಕೆಟ್ ಸಂಬಂಧ ಮುರಿಯಬೇಕು: ಮಾಜಿ ಕ್ರಿಕೆಟಿಗ ಸೌರವ್ ಗಂಗೋಲಿ ಒತ್ತಾಯ

DC vs RCB Match: ಫ್ಯಾನ್ಸ್‌ ಕಾದಿದ್ದ ದಿನಕ್ಕೆ ಕ್ಷಣಗಣನೆ ಶುರು, ಕಿಂಗ್ ಕೊಹ್ಲಿ, ಕೆಎಲ್‌ ರಾಹುಲ್‌ಗೆ ಕೊಡ್ತಾರಾ ಕೌಂಟರ್‌

ಮುಂದಿನ ಸುದ್ದಿ
Show comments