Webdunia - Bharat's app for daily news and videos

Install App

ಗಣಪತಿ ಬಪ್ಪನ ಆಶೀರ್ವಾದ ಪಡೆಯಲು ಸಚಿನ್ ಮನೆಗೆ ಬಂದ ವಿಶೇಷ ಅತಿಥಿ ಯಾರು ಗೊತ್ತೇ?

Webdunia
ಮಂಗಳವಾರ, 6 ಸೆಪ್ಟಂಬರ್ 2016 (13:03 IST)
ಸೋಮವಾರ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ. ಹಬ್ಬದ ಸಂಭ್ರಮದಲ್ಲಿ ವ್ಯಸ್ತರಾಗಿದ್ದರೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟರ್ ಅನುಯಾಯಿಗಳು ಮತ್ತು ಅಭಿಮಾನಿಗಳ ಜತೆಯಲ್ಲಿ ಒಂದು ಪುಟ್ಟ ಕ್ವಿಜ್ ಆಡಲಿಳಿದಿದ್ದರು. 

ತಮ್ಮ ಮನೆಯಲ್ಲಿ ಪೂಜೆಗಿಟ್ಟಿದ್ದ ಗಣೇಶ ಮೂರ್ತಿಯ ಮುಂದೆ ಪ್ರಾರ್ಥನೆಗೆ ಕುಳಿತಿದ್ದ ಒಬ್ಬ ವಿಶೇಷ ಅತಿಥಿಯ ಪೋಟೋವನ್ನು ಟ್ವೀಟ್ ಮಾಡಿದ ಸಚಿನ್,  ಗಣಪತಿ ಬಪ್ಪನ ಆಶೀರ್ವಾದ ಪಡೆದುಕೊಳ್ಳಲು ಯಾರು ಬಂದಿದ್ದಾರೆ ನೋಡಿ. ಇವರು ಯಾರೆಂಬುದನ್ನು ಊಹಿಸಿ ನೋಡೋಣ ಎಂದು ಬರೆದಿದ್ದರು. 

 
ಆ ಫೋಟೋದಲ್ಲಿ ವಿಶೇಷ ಅತಿಥಿಯ ಬೆನ್ನು ಮಾತ್ರ ಕಾಣುತ್ತಿತ್ತು. ಹೀಗಾಗಿ ಅಭಿಮಾನಿಗಳ ಊಹೆಯಲ್ಲಿ ರೋಜರ್ ಫೆಡರರ್‌ನಿಂದ ರಿಕ್ಕಿ ಪಾಟಿಂಗ್‌ವರೆಗೆ ಅನೇಕ ಹೆಸರುಗಳು ಬಂದು ಹೋದವು. 
 
ಕೆಲವೇ ಹೊತ್ತಿನಲ್ಲಿ ಸಚಿನ್ ರಹಸ್ಯ ಅತಿಥಿ ಯಾರೆಂದು ಬಹಿರಂಗ ಪಡಿಸಿದರು. ಅವರು ಬೇರೆ ಯಾರೂ ಅಲ್ಲ ವಿಶ್ವ ವಿಖ್ಯಾತ ಕ್ಷೇತ್ರ ರಕ್ಷಣಾಕಾರ, ಭಾರತವನ್ನು ತವರಿನಷ್ಟೇ ಪ್ರೀತಿಸುತ್ತೇನೆ ಎಂದು ಆಗಾಗ ಹೇಳುತ್ತಲೇ ಬರುತ್ತಿರುವ ಜಾಂಟಿ ರೋಡ್ಸ್ ಆಗಿದ್ದರು. 
 
ಆಸಕ್ತಿದಾಯಕ ವಿಚಾರವೆಂದರೆ ಮತ್ತೊಬ್ಬ ವಿಶೇಷ ಅತಿಥಿ ಕೂಡ ಸಚಿನ್ ಮನೆಯಲ್ಲಿದ್ದರು. ಆದರೆ ಸಚಿನ್ ಕ್ವಿಜ್ ಭಾಗವಾಗಿರದ ಆ ಅತಿಥಿ ಯುವರಾಜ್ ಸಿಂಗ್ .
 
ತಮ್ಮ ಕ್ವಿಜ್‌ಗೆ ಉತ್ತರವಾಗಿ ಸಚಿನ್ ಜಾಂಟಿ ರೋಡ್ಸ್ ಜತೆಗಿರುವ ಮತ್ತು ತಾವು, ಜಾಂಟಿ ಮತ್ತು ಯುವಿ ಜತೆಗೆ ನಿಂತಿರುವ ಫೋಟೋಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. 



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್ ಆಡಲ್ಲ: ಅವರ ಸ್ಥಾನಕ್ಕೆ ಇವರೇ ಬೆಸ್ಟ್ ಅಂತಿದ್ದಾರೆ ಫ್ಯಾನ್ಸ್

ಆರೋಗ್ಯ ಸಂಬಂಧ ಬಿಗ್‌ ಅಪ್ಡೇಡ್ ನೀಡಿದ ಸೂರ್ಯಕುಮಾರ್ ಯಾದವ್‌

ಟೀಂ ಇಂಡಿಯಾಗೆ ಮುಂದಿನ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್

ನಾಚಿಕೆಯಿಲ್ಲದ ನಡವಳಿಕೆ: ಕ್ಯಾಚ್ ಬಿಟ್ಟು ಡ್ಯಾನ್ಸ್ ಮಾಡಿದ ಜೈಸ್ವಾಲ್‌ , ಕ್ರಿಕೆಟ್‌ ಪ್ರೇಮಿಗಳು ಆಕ್ರೋಶ

IND vs ENG: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೋಚ್ ಆಗಲು ಗೌತಮ್ ಗಂಭೀರ್ ಲಾಯಕ್ಕೇ ಅಲ್ಲ

ಮುಂದಿನ ಸುದ್ದಿ
Show comments