Select Your Language

Notifications

webdunia
webdunia
webdunia
webdunia

ಅಚ್ಚರಿ ಕಾರಣ ಹೇಳಿ ಶ್ರೀಲಂಕಾ ಟಿ20 ಕ್ರಿಕೆಟ್ ತಂಡದ ನಾಯಕ ಸ್ಥಾನಕ್ಕೆ ಹಸರಂಗಾ ರಾಜೀನಾಮೆ

Sri Lanka T20 cricket team Captain

Sampriya

ಕೊಲಂಬೊ , ಗುರುವಾರ, 11 ಜುಲೈ 2024 (19:44 IST)
Photo Courtesy X
ಕೊಲಂಬೊ: ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಟಿ20 ನಾಯಕತ್ವಕ್ಕೆ ವನಿಂದು ಹಸರಂಗಾ ಅವರು ರಾಜೀನಾಮೆ ನೀಡಿದ್ದಾರೆ, ಈ ಬಗ್ಗೆ ಪ್ರಕರಟಣೆಯಲ್ಲಿ ತಿಳಿಸಿದ ಅವರು ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಟಿ20 ನಾಯಕತ್ವಕ್ಕೆ  ವನಿಂದು ಹಸರಂಗಾ ನಿರ್ಧರಿಸಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲು ಬಯಸುತ್ತೇವೆಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ) ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರೀಲಂಕಾ ಕ್ರಿಕೆಟ್‌ನ ಹಿತಾಸಕ್ತಿಗಾಗಿ ನಾಯಕನ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದೇನೆ. ತಂಡದ ಆಟಗಾರನಾಗಿ ಮುಂದುವರಿಯುವುದಾಗಿ ಹಸರಂಗಾ ತಿಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಅದಲ್ಲದೆ ಒಬ್ಬ ಆಟಗಾರನಾಗಿ ತಂಡದ ಗೆಲುವಿಗೆ ಸಂಪೂರ್ಣ ಶ್ರಮ ಹಾಕುತ್ತೇನೆ. ನಾನು ನನ್ನ ತಂಡ ಮತ್ತು ನಾಯಕರ ಜೊತೆ ಸದಾ ನಿಲ್ಲುತ್ತೇನೆ ಎಂದು ಹಸರಂಗಾ ತಿಳಿಸಿರುವುದಾಗಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ಹಸರಂಗಾ, ತಂಡವನ್ನು ಸೂಪರ್–8ರ ಹಂತಕ್ಕೆ ಕೊಂಡೊಯ್ಯುವಲ್ಲಿ ವಿಫಲರಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಗೆಲ್ಲಿಸಿಕೊಟ್ಟ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ರಾಜ್ಯ ಸರ್ಕಾರಕ್ಕೆ ಅಸಡ್ಡೆ ಯಾಕೆ