Publish Date: Fri, 21 Jul 2017 (10:03 IST)
Updated Date: Fri, 21 Jul 2017 (10:14 IST)
ಲಂಡನ್: ಮಹಿಳಾ ವಿಶ್ವಕಪ್ ಕ್ರಿಕೆಟ್ ನ ಸೆಮಿಫೈನಲ್ ಪಂದ್ಯದಲ್ಲಿ ನಿನ್ನೆ ಆಸ್ಟ್ರೇಲಿಯಾ ವಿರುದ್ಧ ಭಾರತದ ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ಭರ್ಜರಿಯಾಗಿಯೇ ಇತ್ತು. ಆದರೆ ಆ ನಡುವೆಯೇ ಅವರೊಂದು ಎಡವಟ್ಟು ಮಾಡಿಕೊಂಡರು.
35 ನೇ ಓವರ್ ನಲ್ಲಿ ಹರ್ಮನ್ ಸಹ ಆಟಗಾರ್ತಿ ದೀಪ್ತಿ ಶರ್ಮಾ ಜತೆ ಬ್ಯಾಟಿಂಗ್ ಮಾಡುತ್ತಿದ್ದರು. ಒಂಟಿ ರನ್ ತೆಗೆಯುವ ಭರದಲ್ಲಿ ರನೌಟ್ ಆಗುವ ಅಪಾಯವನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡರು. ಮೊದಲೇ ಆಟ ನಿರ್ಣಾಯಕ ಹಂತದಲ್ಲಿತ್ತು. ಈ ಹಂತದಲ್ಲಿ ಎಡವಟ್ಟು ಮಾಡಿದ್ದು ಹರ್ಮನ್ ಗೆ ಸಿಟ್ಟು ತಡೆಯಲಾಗಲಿಲ್ಲ.
ಅದೇ ರೋಷಾವೇಷದಲ್ಲಿ ದೀಪ್ತಿಗೆ ಬೈದಾಡಿಬಿಟ್ಟರು. ಹರ್ಮನ್ ಬೈಗುಳಕ್ಕೆ ದೀಪ್ತಿ ಪಿಚ್ ಮಧ್ಯದಲ್ಲೇ ಕಣ್ಣೀರು ಹಾಕಿದರು. ಕೊನೆಗೆ ತಮ್ಮ ತಪ್ಪಿನ ಅರಿವಾದ ಹರ್ಮನ್ ದೀಪ್ತಿಗೆ ಸಾರಿ ಕೇಳಿದರಂತೆ. ಹಾಗಂತ ಅವರೇ ಹೇಳಿಕೊಂಡರು. ಪಂದ್ಯದ ಆವೇಶದಲ್ಲಿ ಹಾಗೆ ಆಯ್ತು. ಆದರೆ ನನ್ನ ವರ್ತನೆ ಬಗ್ಗೆ ಆಕೆಯಲ್ಲಿ ಕ್ಷಮೆ ಯಾಚಿಸಿದೆ ಎಂದು ಅವರು ಪಂದ್ಯದ ನಂತರ ಹರ್ಮನ್ ಹೇಳಿಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ