Select Your Language

Notifications

webdunia
webdunia
webdunia
webdunia

ಕದ್ದು ಮುಚ್ಚಿ ಲವ್ ಮಾಡುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಹರ್ಭಜನ್ ಕೊಟ್ಟ ಸಂದೇಶವಿದು!

ಕದ್ದು ಮುಚ್ಚಿ ಲವ್ ಮಾಡುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಹರ್ಭಜನ್ ಕೊಟ್ಟ ಸಂದೇಶವಿದು!
Mumbai , ಶುಕ್ರವಾರ, 24 ಮಾರ್ಚ್ 2017 (10:31 IST)
ಮುಂಬೈ: ಭಾರತೀಯ ಕ್ರಿಕೆಟಿಗರು ಅಷ್ಟು ಬೇಗ ತಮ್ಮ ಪ್ರೀತಿಯ ಹುಡುಗಿಯನ್ನು ಪರಿಚಯಿಸುವುದಿಲ್ಲ, ಪ್ರೀತಿಸುತ್ತಿದ್ದೇನೆಂದು ಒಪ್ಪಿಕೊಳ್ಳುವುದಿಲ್ಲ. ಆ ಪಟ್ಟಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ವೇಗಿ ಜಹೀರ್ ಖಾನ್ ಸೇರುತ್ತಾರೆ.

 

ಸದ್ಯಕ್ಕೆ ಇಬ್ಬರೂ ತಮ್ಮ ಗರ್ಲ್ ಫ್ರೆಂಡ್ ಜತೆ ಊರೂರು ಸುತ್ತುತ್ತಿದ್ದರೂ, ತಾವು ಪ್ರೇಮಿಗಳು ಎಂದು ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ ಮತ್ತು ಮದುವೆಯ ಸುದ್ದಿಯೇ ಎತ್ತುತ್ತಿಲ್ಲ. ಈ ಇಬ್ಬರು ಕ್ರಿಕೆಟಿಗರಿಗೆ ಮದುವೆಯಾಗಿ ಸಂಸಾರಸ್ಥನಾಗಿರುವ ಸ್ಪಿನ್ನರ್ ಹರ್ಭಜನ್ ಸಿಂಗ್ ಒಂದು ಸ್ಪೆಷಲ್ ಮೆಸೇಜ್ ಕೊಟ್ಟಿದ್ದಾರೆ.

 
ವಿರಾಟ್ ಮತ್ತು ಜಹೀರ್ ಈ ವರ್ಷವೇ ಮದುವೆಯಾಗಿ ಸೆಟ್ಲ್ ಆಗುವುದನ್ನು ನೋಡಲು ಬಯಸುತ್ತೇನೆ ಎಂದು ಭಜಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. “ವಿರಾಟ್-ಅನುಷ್ಕಾ ಈ ವರ್ಷವೇ ಮದುವೆಯಾಗುವುದನ್ನು ನೋಡಲು ಬಯಸುತ್ತೇನೆ. ಅಂತಿಮ ನಿರ್ಧಾರ ಅವರೇ ತೆಗೆದುಕೊಳ್ಳಬೇಕಷ್ಟೆ. ಜಹೀರ್ ಕೂಡಾ ಈ ವರ್ಷವೇ ಮದುವೆಯಾಗಿ ಸೆಟ್ಲ್ ಆಗಲಿ” ಎಂದು ಭಜಿ ಹಾರೈಸಿದ್ದಾರೆ.

 
ಜಹೀರ್ ಚಕ್ ದೇ ಇಂಡಿಯಾ ಸಿನಿಮಾ ನಟಿ ಸಾಗರಿಕಾ ಘಾಟೆ ಜತೆ ಲವ್ವಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಅದರ ಬಗ್ಗೆ ಅವರಿಬ್ಬರೂ ತುಟಿ ಬಿಚ್ಚುತ್ತಿಲ್ಲ.  ಇನ್ನು ವಿರಾಟ್ ನ ಪ್ರೀತಿಯ ಹುಡುಗಿ ಅನುಷ್ಕಾ ಎನ್ನುವುದು ಈಗ ಲೋಕಕ್ಕೇ ಗೊತ್ತು ಬಿಡಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಭ್ಯಾಸಕ್ಕಿಳಿಯದ ವಿರಾಟ್ ಕೊಹ್ಲಿ, ಟೀಂ ಇಂಡಿಯಾದಲ್ಲಿ ಆತಂಕ!