ಕೊರೋನಾ ಹೋರಾಟಕ್ಕೆ ಕ್ರಿಕೆಟಿಗ ಹನುಮ ವಿಹಾರಿ ಮಾಡಿದ ಕೆಲಸ ಮೆಚ್ಚಲೇಬೇಕು!

Webdunia
ಶನಿವಾರ, 15 ಮೇ 2021 (08:50 IST)
ಮುಂಬೈ: ಕೊರೋನಾ ವಿರುದ್ಧದ ಹೋರಾಟಕ್ಕೆ ಕ್ರಿಕೆಟಿಗರು ದೇಣಿಗೆ ನೀಡುವ ಮೂಲಕ ನೆರವಾಗುತ್ತಿದ್ದಾರೆ. ಆದರೆ ಟೀಂ ಇಂಡಿಯಾ ಕ್ರಿಕೆಟಿಗ ಹನುಮ ವಿಹಾರಿ ಮಾಡುತ್ತಿರುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


ಹನುಮ ವಿಹಾರಿ ತಮ್ಮದೇ 100 ಜನ ಸ್ವಯಂ ಸೇವಕರ ತಂಡ ಕಟ್ಟಿಕೊಂಡು ಸಂಕಷ್ಟಕ್ಕೀಡಾದವರಿಗೆ ಸಹಾಯ ಮಾಡುತ್ತಿದ್ದಾರೆ. ಅಗತ್ಯವಿರುವವರಿಗೆ ಆಕ್ಸಿಜನ್, ವೆಂಟಿಲೇಟರ್, ಔಷಧಿ ವ್ಯವಸ್ಥೆ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ.

‘ಇದೆಲ್ಲವನ್ನೂ ನಾನು ನನ್ನನ್ನು ವೈಭವೀಕರಿಸಲು ಮಾಡುತ್ತಿಲ್ಲ. ಸ್ಥಳೀಯ ಜನರಿಗೆ ನೆರವಾಗುವ ದೃಷ್ಟಿಯಿಂದ ನನ್ನ ಕೈಲಾದ ಕೆಲಸ ಮಾಡುತ್ತಿದ್ದೇನೆ. ಇದು ಕೇವಲ ಆರಂಭವಷ್ಟೇ’ ಎಂದು ಹನುಮ ವಿಹಾರಿ ಹೇಳಿದ್ದಾರೆ. ಅಷ್ಟೇ ಅಲ್ಲ, ಟ್ವಿಟರ್ ನಲ್ಲಿ ತಮಗೆ ಸಹಾಯಕ್ಕೆ ಮೊರೆ ಇಟ್ಟವರಿಗೆ ಸಹಾಯ ಮಾಡುತ್ತಿದ್ದಾರೆ. ಪ್ರಚಾರದ ಹಂಗಿಲ್ಲದೇ ಅವರು ಮಾಡುತ್ತಿರುವ ಕೆಲಸ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಯಾಕೆ ಹೀಗೆ ಮಾಡಿದೆ, ಎಲ್ಲರ ಎದುರೇ ವೈಭವ್ ಸೂರ್ಯವಂಶಿಗೆ ಬೈದ ರಿಯಾನ್ ಪರಾಗ್ Video

Video: ಅಯ್ಯೋ ಸೋತೆವಲ್ಲಾ.. ಕಣ್ಣೀರು ಹಾಕಿದ ಬೇಬಿ ಬಾಸ್ ವೈಭವ್ ಸೂರ್ಯವಂಶಿ

ವೈಭವ್ ಸೂರ್ಯವಂಶಿ ಸಕ್ಸಸ್ ಆಗೋದು ಹೇಗೆ: ಈ ವಿಡಿಯೋದಲ್ಲಿ ಪ್ರೂವ್ ಆಯ್ತು Video

IPL 2026: ಶುಭಮನ್‌ ಗಿಲ್‌ ಶತಕಕ್ಕೆ ಒಲಿದ ಜಯ: ಫೈನಲ್‌ನಲ್ಲಿ ಆರ್‌ಸಿಬಿ- ಟೈಟನ್ಸ್‌ ಸೆಣಸಾಟ

ಕಳಪೆ ಪ್ರದರ್ಶನದ ಬಳಿಕ ಎಲ್‌ಎಸ್‌ಜಿ ನಾಯಕತ್ವದಿಂದ ರಿಷಭ್‌ ಪಂತ್‌ಗೆ ಗೇಟ್‌ಪಾಸ್‌

ಮುಂದಿನ ಸುದ್ದಿ
Show comments