Select Your Language

Notifications

webdunia
webdunia
webdunia
webdunia

ಅಂದು ಕ್ರಿಕೆಟ್ ಸ್ಟಾರ್‌ಗಳು.. ಇಂದು ಒಪ್ಪೊತ್ತಿನ ಊಟಕ್ಕೂ ತತ್ವಾರ

ಅಂದು ಕ್ರಿಕೆಟ್ ಸ್ಟಾರ್‌ಗಳು.. ಇಂದು ಒಪ್ಪೊತ್ತಿನ ಊಟಕ್ಕೂ ತತ್ವಾರ
ನವದೆಹಲಿ , ಗುರುವಾರ, 8 ಸೆಪ್ಟಂಬರ್ 2016 (12:10 IST)
ಭಾರತವಷ್ಟೇ ಅಲ್ಲ ವಿವಿಧ ದೇಶಗಳ ಕ್ರಿಕೆಟ್ ತಾರೆಯರು ಇಂದು ಕೋಟ್ಯಾಧೀಶ್ವರರಾಗಿದ್ದಾರೆ. ಆದರೆ ಒಂದು ಕಾಲಕ್ಕೆ ಸೆಲಬ್ರಿಟಿ ಕ್ರಿಕೆಟ್ ತಾರೆಗಳೆನಿಸಿದ್ದ ಕೆಲವರು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರೆ ನಂಬುತ್ತೀರಾ?

ಹೌದು. ನೀವು ನಂಬಲೇ ಬೇಕಾದ ವಾಸ್ತವ ಸತ್ಯವಿದು. ಇಲ್ಲಿದೆ ನೋಡಿ ಅಂತ ಕೆಲವರ ಪಟ್ಟಿ:  
 
ಆಡಮ್ ಹೊಲಿಯೊಕ್: ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಈ ಆಟಗಾರ 2008ರವರೆಗೆ ಕ್ರಿಕೆಟ್ ರಂಗದಲ್ಲಿ ಸಕ್ರಿಯರಾಗಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್‌ಗಳೆರಡರಲ್ಲೂ ಮಿಂಚಿದ್ದ ಅವರು ನಿವೃತ್ತರಾದ ಬಳಿಕ ಆಸ್ಟ್ರೇಲಿಯಾಕ್ಕೆ ತೆರಳಿ ಉದ್ಯಮ ಪ್ರಾರಂಭಿಸಿ ಕೈ ಸುಟ್ಟುಗೊಂಡರು. ಮತ್ತೀಗ ಜೀವನ ನಿರ್ವಹಣೆಗಾಗಿ ವೃತ್ತಿಪರ ಬಾಕ್ಸಿಂಗ್ ವೃತ್ತಿಗಿಳಿದಿದ್ದಾರೆ.
 
ಗ್ರೇಮ್ ಪೋಲಾಕ್: ಸ್ಟಾರ್ ಆಟಗಾರರಾಗಿದ್ದ ಇವರು 2 ವರ್ಷದಿಂದ ಗಂಭೀರ ಆರ್ಥಿಕ ಸಮಸ್ಯೆಗೆ ಒಳಗಾಗಿದ್ದಾರೆ. ಇವರ ಬಳಿ ವಾಸಿಸಲು ಮನೆ ಕೂಡ ಇಲ್ಲ. ಹೀಗಾಗಿ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ ಬಳಿ ಸಹಾಯ ಹಸ್ತ ಚಾಚಿದ್ದರು. 
 
ಪೌಲ್ ಸ್ಟ್ರಾಂಗ್:  ಜಿಂಬಾಬ್ವೆಯ ಪರವಾಗಿ ಆಡಿದ್ದ ವಿಶ್ವ ವಿಖ್ಯಾತ ಲೆಗ್ ಸ್ಪಿನ್ನರ್ ಅವರಿಗೆ ಹಣದ ಸಮಸ್ಯೆ ಯಾವ ರೀತಿ ಕಾಡಿತ್ತೆಂದರೆ ಅವರು ಆತ್ಮಹತ್ಯೆಗೂ ಪ್ರಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ. 
 
ಮ್ಯಾಥ್ಯು ಸಿಂಕ್ಲೇರ್:  ನ್ಯೂಜಿಲೆಂಡ್‌ನ ಈ ದಿಗ್ಗಜ ಸಹ ಆರ್ಥಿಕ ಸಮಸ್ಯೆಗೆ ಒಳಗಾಗಿ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಸದ್ಯ ಅವರು ಸೇಲ್ಸ್ ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದಾರೆ. 
 
ಕ್ರೀಸ್ ಗೇನ್ಸ್: ಕೆಲ ವರ್ಷಗಳ ಹಿಂದೆ ನಿವೃತ್ತರಾದ ಕಿವೀಸ್‌ನ ಈ ಆಲ್ ರೌಂಡರ್ ಆಟಗಾರ ತಮ್ಮ ಬೊಂಬಾಟ್ ಆಟದಿಂದಲೇ ಪ್ರಸಿದ್ಧರಾಗಿದ್ದರು. ಮತ್ತೀಗ ಅವರು ಜೀವನ ನಿರ್ವಹಣೆಗಾಗಿ ದುಬೈನಲ್ಲಿ ವಜ್ರ ವ್ಯಾಪಾರವನ್ನು ಮಾಡುತ್ತಿದ್ದಾರೆ. 
 
ಒಂದು ಕಾಲಕ್ಕೆ ಅದ್ಭುತ ಪ್ರದರ್ಶನ ನೀಡಿ ಹಣದ ಹೊಳೆಯಲ್ಲಿಯೇ ಮಿಂದೆದಿದ್ದ ಈ ಕ್ರಿಕೆಟಿಗರ ಈಗಿನ ಪರಿಸ್ಥಿತಿ ಇಷ್ಟರ ಮಟ್ಟಿಗೆ ಹದಗೆಟ್ಟಿರುವುದು ನಿಜಕ್ಕೂ ಖೇದಕರ ಸಂಗತಿಯೇ ಸರಿ. 

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಯಷ್ಟೇ ಫೇಮಸ್ ಈಕೆ!