ಧೋನಿ ಬಗ್ಗೆ ಕೊನೆಗೂ ತುಟಿ ಬಿಚ್ಚಿದ ವೀರೇಂದ್ರ ಸೆಹ್ವಾಗ್

Webdunia
ಭಾನುವಾರ, 8 ಜನವರಿ 2017 (07:04 IST)
ನವದೆಹಲಿ: ಯಾರದ್ದೇ ವಿಶೇಷ ದಿನವಿರಲಿ, ದೇಶದಲ್ಲಿ ಯಾವುದೇ ಹೊಸ ಬೆಳವಣಿಗೆಗಳಾಗಲಿ, ವೀರೇಂದ್ರ ಸೆಹ್ವಾಗ್ ಟ್ವಿಟರ್ ನಲ್ಲೊಂದು ಅದ್ಭುತ ಟ್ವೀಟ್ ಮಾಡುತ್ತಾರೆ. ಆದರೆ ಧೋನಿ ನಾಯಕತ್ವ ತ್ಯಜಿಸಿದ ವಿಚಾರದಲ್ಲಿ ಇದುವರೆಗೆ ಮೌನವಾಗಿದ್ದ ವೀರೂ ಕೊನೆಗೂ ತುಟಿ ಬಿಚ್ಚಿದ್ದಾರೆ.


“ಧೋನಿ ಜನವರಿ ನಾಲ್ಕರಂದು ವಿದಾಯ ಹೇಳಿದರು. ನಾನು ಏಳನೇ ತಾರೀಖಿನವರೆಗೆ ಕಾದು ಅವರ ಮುಂದಿನ ವೃತ್ತಿ ಜೀವನಕ್ಕೆ ಶುಭ ಕೋರುತ್ತಿದ್ದೇನೆ. ಯಾಕೆಂದರೆ ಧೋನಿಗೆ ಏಳನೇ  ಸಂಖ್ಯೆ ಅದೃಷ್ಟವಲ್ಲವೇ?  ಹಾಗಾಗಿ ಅದೇ ದಿನ ಅವರಿಗೆ ವಿಶ್ ಮಾಡುವುದು ಸೂಕ್ತವೆನಿಸಿತು. ಅದಕ್ಕೆ ಈವತ್ತು ಮಾಡುತ್ತಿದ್ದೇನೆ” ಎಂದು ವೀರೂ ಟ್ವೀಟ್ ಮಾಡಿದ್ದಾರೆ.

ಜತೆಗೆ ಧೋನಿಯ ಗುಣಗಾನ ಮಾಡುವುದನ್ನೂ ಮರೆಯಲಿಲ್ಲ. ಆತನ ನಾಯಕನಾಗಿ ಮಾತ್ರವಲ್ಲ, ಒಬ್ಬ ಉತ್ತಮ ಮನುಷ್ಯ ಕೂಡಾ. ನಾಯಕನಾಗಿ ಕೊನೆಯ ಪಂದ್ಯದಲ್ಲಿ ಅಮ್ಮನ ಹೆಸರಿನ ಜೆರ್ಸಿ ತೊಟ್ಟು ಆಡಿದ್ದು ವಿಶೇಷವಾಗಿತ್ತು ಎಂದು ವೀರೂ ಸ್ಮರಿಸಿದ್ದಾರೆ.

ಅಲ್ಲಿಗೆ ವೀರೂ ಧೋನಿಗೆ ಯಾಕೆ ವಿಷ್ ಮಾಡಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರ  ಕೊಟ್ಟಿದ್ದಾರೆ. ಜತೆಗೆ ತಮ್ಮಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಆರೋಪಗಳನ್ನೂ ಒರೆಸುವ ಪ್ರಯತ್ನ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs PAK: ಪಾಕಿಸ್ತಾನ ಸೋಲುತ್ತಿದೆ ಎಂದು ತಿಳಿದು ಕಾರು ಹತ್ತಿ ಓಡಿಯೇ ಹೋದ ಮೊಹ್ಸಿನ್ ನಖ್ವಿ Video

ಅರ್ಷ್ ದೀಪ್ ಸಿಂಗ್ ಎಷ್ಟು ಒಳ್ಳೇವ್ರು.. ಮಗುವಂತೂ ಫುಲ್ ಖುಷಿ Video

ಕುಲದೀಪ್ ಯಾದವ್ ಗೆ ಮೈದಾನದಲ್ಲೇ ಬೈದ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ Video

ಆಡಿದ್ರೆ ಬಿರುಗಾಳಿ, ಇಲ್ಲ ಅಂದ್ರೆ ಗೋಲ್ಡನ್ ಡಕ್: ಲಾಟರಿ ಆಟಗಾರನಾದ್ರಾ ಅಭಿಷೇಕ್ ಶರ್ಮಾ

IND vs PAK: ಟೀಂ ಇಂಡಿಯಾ ಬೌಲರ್ ಗಳ ಮುಂದೆ ಉಸಿರೆತ್ತದ ಪಾಕ್ ಬ್ಯಾಟಿಗರು, ಭಾರತಕ್ಕೆ ಭರ್ಜರಿ ಗೆಲುವು

ಮುಂದಿನ ಸುದ್ದಿ
Show comments