Webdunia - Bharat's app for daily news and videos

Install App

ವಿವಾದಿತ ಟ್ವೀಟ್ ಮಾಡಿ ಅಳಿಸಿ ಹಾಕಿದ ಹರ್ಭಜನ್ ಸಿಂಗ್! ಅಂತಹದ್ದೇನಿತ್ತು ಅದರಲ್ಲಿ?

Webdunia
ಭಾನುವಾರ, 8 ಜನವರಿ 2017 (06:47 IST)
ಮುಂಬೈ: ಹರ್ಭಜನ್ ಸಿಂಗ್ ಯಾವತ್ತೂ ನೇರ ನುಡಿಗೆ ಹೆಸರು ವಾಸಿ. ಪಿಚ್ ವಿಷಯದಲ್ಲಿ ಹಿಂದೊಮ್ಮೆ ಟೀಕೆ ಮಾಡಿ ವಿವಾದಕ್ಕೆ ಕಾರಣವಾಗಿದ್ದ ಭಜಿ ಇದೀಗ ಆಯ್ಕೆ ಸಮಿತಿ ವಿರುದ್ಧವೇ ಟೀಕೆ ಮಾಡುವ ಟ್ವೀಟ್ ಮಾಡಿ ವಿವಾದವಾಗುವ ಲಕ್ಷಣವಾಗುತ್ತಿದ್ದಂತೆ ಡಿಲೀಟ್ ಮಾಡಿದ್ದಾರೆ.

ನಿನ್ನೆಯಷ್ಟೇ ಇಂಗ್ಲೆಂಡ್ ಸರಣಿಗೆ ಘೋಷಿಸಲಾದ ತಂಡದಲ್ಲಿ ಟೆಸ್ಟ್ ನಲ್ಲಿ ತ್ರಿಶತಕ ಭಾರಿಸಿದ್ದ ಕರುಣ್ ನಾಯರ್ ಹೆಸರಿಲ್ಲದಿದ್ದಕ್ಕೆ ಭಜಿ ಆಯ್ಕೆ ಸಮಿತಿಯನ್ನು ಲೇವಡಿ ಮಾಡುವಂತಹ ಟ್ವೀಟ್ ಮಾಡಿದ್ದರು. “ಎಲ್ಲಿ ಕರುಣ್ ನಾಯರ್? ಇಂಗ್ಲೆಂಡ್ ವಿರುದ್ಧ ಈಗಷ್ಟೇ ತ್ರಿಶತಕ ಭಾರಿಸಿದಾತ.. ಏಕದಿನ ಸರಣಿ ಬಿಡಿ. ಅಭ್ಯಾಸ ಪಂದ್ಯದಲ್ಲೂ ಆತನ ಹೆಸರು ಕಾಣುತ್ತಿಲ್ಲವಲ್ಲ? ಕಮಾಲ್…” ಎಂದು ಟ್ವೀಟ್ ಮಾಡಿದ್ದರು.

ಇದು ವಿವಾದವಾಗುವ ಲಕ್ಷಣ ಕಾಣುತ್ತಿದ್ದಂತೆ ತಕ್ಷಣ ಅದನ್ನು ಡಿಲೀಟ್ ಮಾಡಿದರು. ಆದರೆ ಆಗಲೇ ಆ ಟ್ವೀಟ್ ನನ್ನು 44 ಜನ ರಿಟ್ವೀಟ್ ಮಾಡಿದ್ದರು. ಹಿರಿಯ ಸ್ಪಿನ್ನರ್ ಇನ್ನೂ ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಪಡೆದಿಲ್ಲ. ರಣಜಿ ಪಂದ್ಯಗಳಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ್ದರು. ಆದರೂ ಇತ್ತೀಚೆಗೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗುತ್ತಿಲ್ಲ. ಬಹುಶಃ ಈ ಅಸಮಧಾನವನ್ನು ಈ ರೀತಿ ಹೊರ ಹಾಕುತ್ತಿರಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ಭಾರತ ಪಾಕಿಸ್ತಾನ ಬಗ್ಗೆ ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ ಹೇಳಿದ್ದೇನು

IPL 2025: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ

Jay Shah: ಅಪ್ಪ ನಂಗೂ ಒಂದು ಮಿಸೈಲ್ ಕೊಡು ಎಂದು ರಾವಲ್ಪಿಂಡಿಗೆ ಹೊಡೆದ ಜಯ್ ಶಾ

IPL 2025 RCB vs LSG: ಆರ್ ಸಿಬಿ ವರ್ಸಸ್ ಎಲ್ಎಸ್ ಜಿ ಪಂದ್ಯ ಇಂದು ನಡೆಯುತ್ತಾ

IPL 2025: ಮನೆಗೆ ಹೋಗಿ ಎಂದು ಧರ್ಮಶಾಲಾ ಮೈದಾನದಿಂದ ಪ್ರೇಕ್ಷಕರಿಗೆ ಸೂಚನೆ video

ಮುಂದಿನ ಸುದ್ದಿ
Show comments