ಮುಂಬೈ: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡವನ್ನು ಧೋನಿ ಮುನ್ನಡೆಸಲಿದ್ದಾರೆ. ಇದು ನಾಯಕನಾಗಿ ಅವರ ಕೊನೆಯ ಪಂದ್ಯ. ಹಾಗಾಗಿ ಅಭಿಮಾನಿಗಳು ಈ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.
ಮುಂಬೈ ಪೊಲೀಸರು ಈ ಪಂದ್ಯಕ್ಕೆ ಭದ್ರತೆ ಒದಗಿಸಲು 60 ಲಕ್ಷ ರೂ. ಕೇಳಿದ್ದರು. ಆರಂಭದಲ್ಲಿ ಬಿಸಿಸಿಐ ಇಷ್ಟು ಮೊತ್ತ ನೀಡಲು ನಿರಾಕರಿಸಿತ್ತು. ಹೀಗಾಗಿ ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸುವ ಅವಕಾಶ ಸಿಗದಿರುವ ಸಾಧ್ಯತೆ ಇತ್ತು.
ಆದರೆ ಕೊನೆಗೂ ಬಿಸಿಸಿಐ ಪೊಲೀಸರ ವೆಚ್ಚ ಭರಿಸಲು ಮುಂದಾದ ಹಿನ್ನಲೆಯಲ್ಲಿ ಅಭಿಮಾನಿಗಳಿಗೆ ಉಚಿತವಾಗಿ ಪಂದ್ಯ ವೀಕ್ಷಿಸಲು ಅವಕಾಶ ನೀಡಲಾಗಿದೆ. ಇಂದು ಅಪರಾಹ್ನ 3 ಗಂಟೆಯಿಂದ ಪಂದ್ಯ ಆರಂಭವಾಗಲಿದೆ. ಈ ಪಂದ್ಯ ಕೇವಲ ಅಭ್ಯಾಸ ಪಂದ್ಯವಾದರೂ, ಧೋನಿಗೆ ನಾಯಕರಾಗಿ ಕೊನೆಯ ಪಂದ್ಯ ಎನ್ನುವ ಕಾರಣಕ್ಕೆ ಮಹತ್ವ ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ