Daily Horoscope
✕

ಕೆಎಲ್ ರಾಹುಲ್ ಗೆ ಉಪನಾಯಕತ್ವ: ಅಪಸ್ವರವೆತ್ತಿದ ಟೀಂ ಇಂಡಿಯಾ ಕ್ರಿಕೆಟಿಗ!

Webdunia
ಬುಧವಾರ, 28 ಅಕ್ಟೋಬರ್ 2020 (11:04 IST)
ಮುಂಬೈ: ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಕೆಎಲ್ ರಾಹುಲ್ ಗೆ ಟಿ20 ಸರಣಿಗೆ ಉಪನಾಯಕತ್ವದ ಪಟ್ಟ ಕಟ್ಟಲಾಗಿದೆ. ಈ ಬಗ್ಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರೊಬ್ಬರು ಅಪಸ್ವರವೆತ್ತಿದ್ದಾರೆ. ಅವರು ಬೇರೆ ಯಾರೂ ಅಲ್ಲ, ದೀಪ್ ದಾಸ್ ಗುಪ್ತಾ.


ಕೆಎಲ್ ‍ರಾಹುಲ್ ರನ್ನು ಇಷ್ಟು ಅವಸರದಲ್ಲಿ ಉಪ ನಾಯಕ ಎಂದು ಘೋಷಣೆ ಮಾಡಬಾರದಿತ್ತು. ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಳ್ಳುವವರೆಗೆ ಕಾಯಬಹುದಿತ್ತು. ಒಂದು ವೇಳೆ ಅವರು ಮುಂಬೈ ಇಂಡಿಯನ್ಸ್ ಪರ ಆಡಲು ಫಿಟ್ ಆದರೆ ಟೀಂ ಇಂಡಿಯಾಕ್ಕೂ ಬರಬಹುದು. ಅದಕ್ಕಿಂತ ಮೊದಲೇ ಅವಸರದಲ್ಲಿ ರಾಹುಲ್ ರನ್ನು ಉಪನಾಯಕನಾಗಿ ಘೋಷಿಸಿದ್ದು ಸರಿಯಲ್ಲ ಎಂದು ದೀಪ್ ದಾಸ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲ, ಇನ್ನೊಬ್ಬ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಕೂಡಾ ಈಗ ಗಾಯಗೊಂಡಿದ್ದಾರೆ. ಆದರೆ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಿದ್ದಾರೆ. ಹಾಗಿದ್ದರೆ ರೋಹಿತ್ ಕೂಡಾ ಮುಂದೆ ಚೇತರಿಸಿಕೊಳ್ಳಬಹುದು, ಅವರನ್ನು ಯಾಕೆ ಆಯ್ಕೆ ಮಾಡಲಾಗಿಲ್ಲ ಎಂದು ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೌರ್ ನಡುವೆ ಹೀಗೆಲ್ಲಾ ನಡೆಯುತ್ತಿತ್ತಾ.. ಹರಿದಾಡುತ್ತಿದೆ ಹೀಗೊಂದು ಸುದ್ದಿ

ಅಜಿತ್ ಅಗರ್ಕರ್ ಹೋಗಿದ್ದಕ್ಕೆ ಭುವನೇಶ್ವರ್ ಕಮ್ ಬ್ಯಾಕ್, ಶಮಿಗೂ ಹೀಗೇ ಆಗಲಿ ಎಂದ ಫ್ಯಾನ್ಸ್

IND vs WI: ಭಾರತ vs ವೆಸ್ಟ್ ಇಂಡೀಸ್ 1st T20: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ; ನಮನ್ ಧೀರ್ ಟಿ20ಐ ಪದಾರ್ಪಣೆ

ಹರ್ಮನ್ ಪ್ರೀತ್ ಕೌರ್ ನಂತರ ಮಹಿಳಾ ಕ್ರಿಕೆಟ್ ತಂಡಕ್ಕೆ ಸ್ಮೃತಿ ಮಂಧಾನ ನಾಯಕಿ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ

ವಿಧಾನಸೌಧದಲ್ಲಿ ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಭವ್ಯ ಸನ್ಮಾನ: ಸಿಎಂ ಡಿ.ಕೆ. ಶಿವಕುಮಾರ್ ಗೌರವ

ಮುಂದಿನ ಸುದ್ದಿ
Show comments