Select Your Language

Notifications

webdunia
webdunia
webdunia
webdunia

ಭಾರತ-ಇಂಗ್ಲೆಂಡ್ ಫೈನಲ್ ಆಗುತ್ತಾ? ವಿರಾಟ್ ಕೊಹ್ಲಿ ಹೇಳಿದ್ದೇನು?!

ಭಾರತ-ಇಂಗ್ಲೆಂಡ್ ಫೈನಲ್ ಆಗುತ್ತಾ? ವಿರಾಟ್ ಕೊಹ್ಲಿ ಹೇಳಿದ್ದೇನು?!
London , ಮಂಗಳವಾರ, 13 ಜೂನ್ 2017 (10:26 IST)
ಲಂಡನ್: ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ತಂಡಗಳು ಪಕ್ಕಾ ಆಗಿದೆ. ಇದೀಗ ಫೈನಲ್ ಗೇರುವ ತಂಡಗಳು ಯಾವುದು ಎಂಬ ಲೆಕ್ಕಾಚಾರ ಶುರುವಾಗಿದೆ.


 
ಹಾಗಿದ್ದರೆ ಭಾರತ ಬಾಂಗ್ಲಾದೇಶವನ್ನು ಮಣಿಸಿ, ಇಂಗ್ಲೆಂಡ್ ಪಾಕಿಸ್ತಾನವನ್ನು ಮಣಿಸಿ ಫೈನಲ್ ಗೇರುತ್ತಾ? ಇಂಗ್ಲೆಂಡ್ ತಂಡವನ್ನು ಮತ್ತೊಮ್ಮೆ ಫೈನಲ್ ನಲ್ಲಿ ಎದುರಿಸಲು ಟೀಂ ಇಂಡಿಯಾ ರೆಡಿಯಾಗಿದೆಯಾ ಎಂಬ ಪ್ರಶ್ನೆಗೆ ಸ್ವತಃ ನಾಯಕ ಕೊಹ್ಲಿ ಉತ್ತರಿಸಿದ್ದಾರೆ.

ಇಂಗ್ಲೆಂಡ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಭಾರತ ಮತ್ತು ಇಂಗ್ಲೆಂಡ್ ಆಟಗಾರರಿಗಾಗಿ ಏರ್ಪಡಿಸಿದ್ದ ವಿಶೇಷ ಸ್ಮರಣೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೊಹ್ಲಿಗೆ ಇಂತಹದ್ದೊಂದು ಪ್ರಶ್ನೆ ಎದುರಾಯಿತು.

ಅದಕ್ಕೆ ಉತ್ತರಿಸಿದ ಕೊಹ್ಲಿ ‘ಎದುರಾಳಿ ಯಾರಾದರೂ ಸರಿಯೇ. ನಾವು ಆಡುತ್ತೇವೆ. ನಾವು ಸೆಣಸಲು ರೆಡಿ’ ಎಂದು ಉತ್ತರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಹಾಗೂ ಇಂಗ್ಲೆಂಡ್ ನ ಕೆಲವು ಮಾಜಿ ಆಟಗಾರರೂ ಉಪಸ್ಥಿತರಿದ್ದರು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ ಪಂದ್ಯ ವೀಕ್ಷಣೆಗೆ ಖುದ್ದು ಹಾಜರಿದ್ದ ಸಾನಿಯಾ ಮಿರ್ಜಾ!