ಇಂಗ್ಲೆಂಡ್‌ನ ಅಂಗವೈಕಲ್ಯ ಕ್ರಿಕೆಟ್ ತಂಡದ ಆಟಗಾರ ಲಿಯಾಮ್ ಥಾಮಸ್ ಮೊನ್ನೆ ತಾವು ಮೈದಾನದಲ್ಲಿ ತೋರಿದ ದೃಢ ಸಂಕಲ್ಪದಿಂದ ಕ್ರಿಕೆಟ್ ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ. ಐಸಿಸಿ ಅಕಾಡೆಮಿ ದುಬೈ ಆಹ್ವಾನಿತ ಟ್ವೆಂಟಿ 20 ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರ ಬಾರಿಸಿದ ಚೆಂಡು ಬೌಂಡರಿ ಗೆರೆ ಕಡೆ ಹೋಗುತ್ತಿದ್ದುದನ್ನು ತಡೆಯಲು ಹೋದಾಗ ಥಾಮಸ್ ಕೃತಕ ಕಾಲು ಕಳಚಿ ಬಿದ್ದಿದೆ. ಆದರೆ ಅದನ್ನು ಲೆಕ್ಕಿಸದ ಥಾಮಸ್ ಒಂಟಿ ಕಾಲಲ್ಲಿ ಓಡಿ ಚೆಂಡು ಬೌಂಡರಿ ಗೆರೆ ದಾಟಿ ಹೋಗುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಥಾಮಸ್ ಅವರು ಆಟದ ಮೇಲೆ ಹೊಂದಿರುವ ಶ್ರದ್ಧೆ, ದೃಢ ಸಂಕಲ್ಪ ಎಲ್ಲರಿಂದಲೂ ಪ್ರಶಂಸೆಗೆ ಒಳಗಾಗುತ್ತಿದ್ದು ಇದು ಎಲ್ಲ ಕ್ರೀಡಾಪಟುಗಳಿಗೆ ಮಾದರಿ ಎಂದು ವರ್ಣಿಸಲಾಗುತ್ತಿದೆ.
ಕೃತಕ ಕಾಲು ಕಳಚಿದರೂ ಫಿಲ್ಡಿಂಗ್ ಬಿಡಲಿಲ್ಲ ನೋಡಿ ( ವೈರಲ್ ವಿಡಿಯೋ)