ಮುಂಬೈ: ಯಶಸ್ಸು ಸಿಕ್ಕಿತೆಂದು ಮರೆಯಬೇಡಿ. ಆಸ್ಟ್ರೇಲಿಯಾ ತಂಡವನ್ನು ಹಗುರವಾಗಿ ಪರಿಗಣಿಸಬೇಡಿ. ನೀವು ಎದುರಿಸುವ ಕಠಿಣ ಸವಾಲು ಈ ಸರಣಿ ಆಗಿದ್ದೀತು ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಟೀಂ ಇಂಡಿಯಾಕ್ಕೆ ಎಚ್ಚರಿಸಿದ್ದಾರೆ.
ಫೆಬ್ರವರಿ ಅಂತ್ಯದಲ್ಲಿಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಟೆಸ್ಟ್ ಸರಣಿ ನಡೆಯಲಿದೆ. ಇದಕ್ಕಾಗಿ ಉಭಯ ತಂಡಗಳ ಆಟಗಾರರ ನಡುವೆ ಈಗಾಗಲೇ ಮಾತಿನ ಯುದ್ಧ ಆರಂಭವಾಗಿದೆ. ನಂ.1 ಟೆಸ್ಟ್ ತಂಡವಾಗಿರುವ ಟೀಂ ಇಂಡಿಯಾ ಇತ್ತೀಚೆಗೆ ಈ ಮಾದರಿಯಲ್ಲಿ ಕಾಣುತ್ತಿರುವ ಯಶಸ್ಸಿನಿಂದ ಮೈಮರೆಯಬಾರದು ಎಂಬುದು ಸಚಿನ್ ಕಳಕಳಿ.
ನಮ್ಮದು ವಿಶ್ವದಲ್ಲೇ ಶ್ರೇಷ್ಠ ಕ್ಷೇತ್ರ ರಕ್ಷಕರಿರುವ ತಂಡ. ಅದು ನಮಗೆ ಸಮಸ್ಯೆಯೇ ಅಲ್ಲ. ನನಗೆ ಗೊತ್ತು ನಮ್ಮ ತಂಡ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ತಯಾರಾಗಲಿದೆ. ಆದರೂ ಆಸ್ಟ್ರೇಲಿಯಾ ಹಿಂದಿನಷ್ಟು ಸ್ಟ್ರಾಂಗ್ ಆಗಿಲ್ಲ ಎನ್ನುವ ಕಾರಣಕ್ಕೆ ಹಗುರವಾಗಿ ಕಾಣುವಂತಿಲ್ಲ ಎಂದು ಸಚಿನ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ