Webdunia - Bharat's app for daily news and videos

Install App

ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ಸ್ಥಾನದಿಂದ ಹೊರಗೆ ಬಂದಿರುವುದಕ್ಕೆ ಕಾರಣ ಕೊಟ್ಟ ದೊಡ್ಡ ಗಣೇಶ್

Sampriya
ಭಾನುವಾರ, 6 ಅಕ್ಟೋಬರ್ 2024 (16:39 IST)
Photo Courtesy X
ಬೆಂಗಳೂರು: ಕೀನ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದಿರುವ ಟೀಂ ಇಂಡಿಯಾ ಮಾಜಿ  ಆಟಗಾರ, ಕನ್ನಡಿಗ ದೊಡ್ಡ ಗಣೇಶ್ ಅವರು ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು, ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹಗಳು ಹರಿದಾಡುತ್ತಿದ್ದು, ಸತ್ಯಾಂಶವನ್ನು ತಿಳಿದುಕೊಂಡು ಸುದ್ದಿ ಪ್ರಸಾರ ಮಾಡುವಂತೆ ವಿನಂತಿಸಿಕೊಂಡಿದ್ದಾರೆ.

ದೊಡ್ಡ ಗಣೇಶ್ ಅವರು ಹಂಚಿಕೊಂಡ ಫೋಸ್ಟ್‌ನಲ್ಲಿ ಹೀಗಿದೆ.  

ಎಲ್ಲರಿಗೂ ನಮಸ್ಕಾರ,ನಾನು ನಿಮ್ಮ ದೊಡ್ಡ ಗಣೇಶ್. ಭಾರತ ಟೆಸ್ಟ್ ತಂಡದ ಮಾಜಿ ಆಟಗಾರ. ನಾನ್ ಇವತ್ತು ಈ ವೀಡಿಯೋ ಮಾಡೋಕೆ, ಒಂದು ಕಾರಣ ಇದೆ. ಅದೇನಪ್ಪ ಅಂದ್ರಾ..! ಇತ್ತೀಚಿಗಷ್ಟೆ ಕೆಲ ಮಾಧ್ಯಮಗಳು ನನ್ನ ಬಗ್ಗೆ ಏನೇನೋ ಸುದ್ದಿ ಪ್ರಸಾರ ಮಾಡ್ತಿವೆ. ದಯವಿಟ್ಟು ಸತ್ಯಾಂಶವನ್ನ
ತಿಳಿದುಕೊಂಡು, ಪ್ರಸಾರ ಮಾಡಿ.

ಕಳೆದ ಕೆಲ ದಿನಗಳ ಹಿಂದೆ, ಕೀನ್ಯಾ ನ್ಯಾಷನಲ್ ಟೀಮ್ ಕೋಚ್ ಆಗಿ, ನನ್ನನ್ನ ಆಯ್ಕೆ ಮಾಡಲಾಗಿತ್ತು. ಆದ್ರೆ ಕೆಲ ಕಾರಣಗಳಿಂದ ನಾನು, ಕೀನ್ಯಾ ತಂಡದ ಕೋಚ್ ಹುದ್ದೆಯಿಂದ ಕೆಳಗಿಳಿಯಬೇಕಾಯ್ತು. ಕೀನ್ಯಾ ಕ್ರಿಕೆಟ್ ಮಂಡಳಿಯಲ್ಲಿನ ಎರಡು ಗುಂಪುಗಳ ನಡುವಿನ ಮನಸ್ಥಾಪವೇ, ಇದಕ್ಕೆಲ್ಲಾ ಕಾರಣವಾಗಿದೆ.

ಆದ್ರೆ ಒಬ್ಬ ಭಾರತ ತಂಡದ ಮಾಜಿ ಆಟಗಾರನಾಗಿ, ನನಗೆ ಸಿಗಬೇಕಾದ ಗೌರವ ಇಲ್ಲಿ ಸಿಗ್ತಿದೆ. ನನ್ನನ್ನ ಯಾರೂ SACK ಮಾಡಲಿಲ್ಲ. SACK ಅನ್ನೋ ಪದವನ್ನ ದಯವಿಟ್ಟು ಬಳಸಬೇಡಿ. ಕೀನ್ಯಾ ಕ್ರಿಕೆಟ್ ಮಂಡಳಿ, ಕೆಲ ದಿನಗಳ ಕಾಲ ಕಾಲಾವಾಕಾಶ ಕೋರಿ, ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಹಾಗಾಗಿ ನಾನು ಇನ್ನೂ ಕೀನ್ಯಾದ ನೈರೋಬಿಯಲ್ಲೇ, ಉಳಿದುಕೊಂಡಿದ್ದೇನೆ.

ನೋಡೋಣ, ಕೀನ್ಯಾ ಕ್ರಿಕೆಟ್ ಮಂಡಳಿ ಏನ್ ನಿರ್ಧಾರ ತೆಗೆದುಕೊಳ್ಳುತ್ತೆ ಅಂತ..! ಅವ್ರು ಏನೇ ನಿರ್ಧಾರ ತೆಗೆದುಕೊಂಡ್ರೂ, ನನಗೆ ಖುಷಿ. ಅವ್ರು ಮನವಿ ಮಾಡಿರೋದ್ರಿಂದ, ನಾನು ಇನ್ನೂ ಇಲ್ಲೇ ಇದ್ದೇನೆ. ಹಾಗಾಗಿ ಮಾಧ್ಯಮಗಳಿಗೆ ನಾನು ಹೇಳೋದು ಇಷ್ಟೆ.! ಸತ್ಯವನ್ನ, ಇರೋ ವಿಚಾರವನ್ನ ಜನರಿಗೆ ತಿಳಿಸಿ.. ಇದು ನಿಮ್ಮೆಲ್ಲರಿಗೂ ನನ್ನ ಕಳಕಳಿಯ ಮನವಿ..!<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments