Select Your Language

Notifications

webdunia
webdunia
webdunia
webdunia

11 ವರ್ಷಗಳ ಬಳಿಕ ಟ್ರೋಫಿ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಕೊಟ್ಟ ಬಹುಮಾನ ಎಷ್ಟು ಗೊತ್ತಾ

Hardik Pandya

Sampriya

ನವದೆಹಲಿ , ಸೋಮವಾರ, 1 ಜುಲೈ 2024 (14:31 IST)
Photo Courtesy X
ನವದೆಹಲಿ: ಭಾರತಕ್ಕೆ 11 ವರ್ಷಗಳ  ವರ್ಷಗಳ ಬಳಿಕ  ಟಿ 20 ವಿಶ್ವಕಪ್ ಅನ್ನು ತಂದು ಕೊಟ್ಟ ಟೀಂ ಇಂಡಿಯಾಗೆ  ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ)  ಭಾರಿ ಬಹುಮಾನವನ್ನು ಘೋಷಿಸಿತು.

ಜೂನ್ 29, ಶನಿವಾರದಂದು ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಎರಡನೇ T20 ವಿಶ್ವಕಪ್ ಗೆದ್ದಿತು. ಇನ್ನೂ ಈ ಐತಿಹಾಸಿದ ಗೆಲುವನ್ನು ಇಡೀ ಭಾರತವೇ ಸಂಭ್ರಮಿಸಿ, ಟೀ ಇಂಡಿಯಾದ ಸಾಧನೆಯನ್ನು ಕೊಂಡಾಡಿತು. ಸಾಮಾಜಿಕ ಜಾಲತಾಣಗಳಲ್ಲಿ ಟೀ ಇಂಡಿಯಾದ ಗೆಲುವಿನ ಸಂಭ್ರಮವನ್ನು ಹಂಚಿಕೊಂಡ ಅಭಿನಂದನೆ ಸಲ್ಲಿಸಿದರು.

ಭಾರತವು ಏಳು ರನ್‌ಗಳಿಂದ ಪಂದ್ಯವನ್ನು ಗೆದ್ದಿತು ಮತ್ತು ಐಸಿಸಿ ಟ್ರೋಫಿಗಾಗಿ ಅವರ 11 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸೆಲೆಬ್ರಿಟಿಗಳು ತಂಡಕ್ಕೆ ಶುಭಹಾರೈಸಿದ್ದರು.

ಮೆನ್ ಇನ್ ಬ್ಲೂ ಅವರ ಐತಿಹಾಸಿಕ ವಿಜಯದ ನಂತರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಆಟಗಾರರು, ತರಬೇತುದಾರರು ಮತ್ತು ಸಂಪೂರ್ಣ ಸಹಾಯಕ ಸಿಬ್ಬಂದಿ ಸೇರಿದಂತೆ INR 125 ಕೋಟಿಯ ಸಂಪೂರ್ಣ ತಂಡಕ್ಕೆ ಭಾರಿ ಬಹುಮಾನದ ಹಣವನ್ನು ಘೋಷಿಸಿದರು. ತಮ್ಮ ಅತ್ಯುತ್ತಮ ಸಾಧನೆಗಾಗಿ ಇಡೀ ತಂಡವನ್ನು ಅಭಿನಂದಿಸುತ್ತಲೇ ಜಯ್ ಶಾ ತಮ್ಮ ಎಕ್ಸ್ ಖಾತೆಯಲ್ಲಿ ಈ ಘೋಷಣೆ ಮಾಡಿದ್ದಾರೆ.

"ಐಸಿಸಿ ಪುರುಷರ T20 ವಿಶ್ವಕಪ್ 2024 ಗೆದ್ದ ಟೀಮ್ ಇಂಡಿಯಾಕ್ಕೆ INR 125 ಕೋಟಿಗಳ ಬಹುಮಾನದ ಹಣವನ್ನು ಘೋಷಿಸಲು ನನಗೆ ಸಂತೋಷವಾಗಿದೆ. ತಂಡವು ಪಂದ್ಯಾವಳಿಯ ಉದ್ದಕ್ಕೂ ಅಸಾಧಾರಣ ಪ್ರತಿಭೆ, ದೃಢತೆ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದೆ. ಈ ಅತ್ಯುತ್ತಮ ಸಾಧನೆಗಾಗಿ ಎಲ್ಲಾ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು! ಎಂದು ಜಯ್ ಶಾ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

  

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯಿಂದ ಬಂಪರ್‌ ಆಫರ್‌