ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಮಹತ್ವದ ಬದಲಾವಣೆ ಮಾಡುವ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸೂಚನೆ ನೀಡಿದ್ದಾರೆ.
ಅವಕಾಶಕ್ಕಾಗಿ ಹಾತೊರೆಯುತ್ತಿರುವ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ರನ್ನು ಆಡಿಸುವ ಸುಳಿವನ್ನು ಕೊಹ್ಲಿ ನೀಡಿದ್ದಾರೆ. ಹಾಗಾದರೆ ಧೋನಿಗೆ ರೆಸ್ಟ್ ನೀಡುತ್ತಾರಾ ಎನ್ನುವ ಪ್ರಶ್ನೆಯೇಳುತ್ತದೆ.
‘ಕೆಲವು ಹುಡುಗರಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಹಾಗಾಗಿ ಅವರಿಗೆ ಅವಕಾಶ ನೀಡುವ ಕುರಿತು ಸಮಾಲೋಚನೆ ನಡೆಸಲಿದ್ದೇವೆ. ಓಪನರ್ ಆಗಿ ಅಜಿಂಕ್ಯಾ ಉತ್ತಮ ಕೆಲಸ ಮಾಡಿದ್ದಾರೆ. ಇದೀಗ ಇನ್ನೂ ಹೆಚ್ಚಿನ ಪ್ರಯೋಗ ನಡೆಸಲು ಚಿಂತನೆ ನಡೆಸಿದ್ದೇವೆ’ ಎಂದು ಕೊಹ್ಲಿ ಹೇಳಿದ್ದಾರೆ.
ಈ ಮೂಲಕ ಪರ್ಯಾಯ ಆಟಗಾರರಿಗೆ ಅವಕಾಶ ನೀಡಿ ಭವಿಷ್ಯದ ತಂಡ ಕಟ್ಟಲು ಪ್ರಯತ್ನಿಸಲಿದ್ದಾರೆ. ರಿಷಬ್ ಪಂತ್ ರಂತಹ ಹೊಡೆ ಬಡಿಯ ಆಟಗಾರರಿಗೆ ಇನ್ನೂ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿಲ್ಲ. ಅವರನ್ನು ಭವಿಷ್ಯದ ಧೋನಿಯೆಂದೇ ಪರಿಗಣಿಸಲಾಗುತ್ತಿದೆ. ಅಲ್ಲದೆ, ಧೋನಿ ಕೂಡಾ ರಿಷಬ್ ಗೆ ಆಗಾಗ ಸಲಹೆ ಸೂಚನೆ ನೀಡುತ್ತಿರುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ