Publish Date: Sat, 21 Jan 2017 (09:15 IST)
Updated Date: Sat, 21 Jan 2017 (09:24 IST)
ಕೋಲ್ಕೊತ್ತಾ: ಇತ್ತೀಚೆಗಷ್ಟೇ ಏಕದಿನ ಪಂದ್ಯಗಳ ನಾಯಕತ್ವ ತ್ಯಜಿಸಿದ ಟೀಂ ಇಂಡಿಯಾ ಮಾಜಿ ನಾಯಕ ಧೋನಿಗೆ ಕೋಲ್ಕೊತ್ತಾದಲ್ಲಿ ನಡೆಯಲಿರುವ ಅಂತಿಮ ಏಕದಿನ ಪಂದ್ಯಕ್ಕೆ ಮೊದಲು ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಇದುವರೆಗೆ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಧೋನಿಗೆ ಸ್ಮರಣಿಕೆ ನೀಡಿ ಗೌರವಿಸಲು ಬೆಂಗಾಳ ಕ್ರಿಕೆಟ್ ಸಂಸ್ಥೆ ತೀರ್ಮಾನಿಸಿದೆ. ಧೋನಿ ಮೂಲತಃ ರಾಂಚಿಯವರಾದರೂ, ಅವರ ಪತ್ನಿ ಕೋಲ್ಕೊತ್ತಾದವರಾದ್ದರಿಂದ ಇದು ಅವರಿಗೆ ಎರಡನೇ ತವರಿದ್ದಂತೆ.
ಈ ಹಿನ್ನಲೆಯಲ್ಲಿ ಭಾರತ ತಂಡದ ಇನ್ನೊಬ್ಬ ಯಶಸ್ವೀ ನಾಯಕ ಸೌರವ್ ಗಂಗೂಲಿಯಿಂದ ಸನ್ಮಾನಿತರಾಗುವ ಭಾಗ್ಯ ಧೋನಿಯದ್ದಾಗಲಿದೆ. ಹಿಂದೆ ಸುನಿಲ್ ಗವಾಸ್ಕರ್ ರನ್ನು ಸನ್ಮಾನಿಸಿದ ರೀತಿಯಲ್ಲೇ ಅದ್ಧೂರಿಯಾಗಿ ಧೋನಿಯನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದು ಕ್ರಿಕೆಟ್ ಸಂಸ್ಥೆ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ