Publish Date: Thu, 16 Mar 2017 (09:36 IST)
Updated Date: Thu, 16 Mar 2017 (09:40 IST)
ನವದೆಹಲಿ: ಧೋನಿ ಅಂತಿಮ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ಹಲವು ಬಾರಿ ಭಾರತಕ್ಕೆ ಗೆಲುವು ಕೊಡಿಸಿದ್ದರು. ಮತ್ತೊಮ್ಮೆ ಅಂತಹದ್ದೇ ಕಮಾಲ್ ಮಾಡಿದ್ದಾರೆ. ಅದು ವಿಜಯ್ ಹಜಾರೆ ಟ್ರೋಫಿಯಲ್ಲಿ.
ಜಾರ್ಖಂಡ್ ತಂಡದ ನಾಯಕರಾಗಿರುವ ಧೋನಿ ವಿದರ್ಭ ವಿರುದ್ಧ ಈ ಮ್ಯಾಜಿಕ್ ಮಾಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ್ದ ವಿದರ್ಭ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಗೆ 159 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ್ದ ಜಾರ್ಖಂಡ್ 45.1` ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಧೋನಿ ಅಜೇಯ 18 ರನ್ ಗಳಿಸಿದರು. ಅಂತಿಮ ಎಸೆತದಲ್ಲಿ ಧೋನಿ ಸಿಕ್ಸರ್ ನೊಂದಿಗೆ ಜಾರ್ಖಂಡ್ ಗೆಲುವು ದಾಖಲಿಸಿತು ಮತ್ತು ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ಗೇರಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ