Select Your Language

Notifications

webdunia
webdunia
webdunia
webdunia

ಧೋನಿ ಬ್ಯಾಟ್ ಕ್ಲಿಕ್ ಆಯ್ತು.. ಇದುವರೆಗೆ ಮಾಡಿರದ ದಾಖಲೆಯಾಯ್ತು..!

ಧೋನಿ ಬ್ಯಾಟ್ ಕ್ಲಿಕ್ ಆಯ್ತು.. ಇದುವರೆಗೆ ಮಾಡಿರದ ದಾಖಲೆಯಾಯ್ತು..!

ಕೃಷ್ಣವೇಣಿ ಕೆ

ಬೆಂಗಳೂರು , ಗುರುವಾರ, 2 ಫೆಬ್ರವರಿ 2017 (10:14 IST)
ಬೆಂಗಳೂರು: ಧೋನಿ ನಾಯಕತ್ವ ತ್ಯಜಿಸಿದ ಸಂದರ್ಭದಲ್ಲಿ ಹಾಲಿ ನಾಯಕ ವಿರಾಟ್ ಕೊಹ್ಲಿ ಒಂದು ಮಾತು ಹೇಳಿದ್ದರು. ಅವರಿನ್ನು ಸ್ವತಂತ್ರರಾಗಿ ಆಡಬಹುದು. ಧೋನಿ ಇನ್ನು ಹಲವು ದಾಖಲೆಗಳು ಮಾಡುತ್ತಾರೆ ನೋಡಿ ಎಂದಿದ್ದರು. ಅದು ನಿಜವಾಗಿದೆ.


ನಿನ್ನೆಯ ಪಂದ್ಯದಲ್ಲಿ ಧೋನಿ ಅರ್ಧಶತಕ ಗಳಿಸಿದರು. ಧೋನಿ ಅರ್ಧ ಶತಕ ಗಳಿಸಿದರೆ ಅದೇನು ವಿಶೇಷ ಎನ್ನಬಹುದು. ಆದರೆ 76 ಟಿ20 ಪಂದ್ಯಗಳನ್ನಾಡಿರುವ ಧೋನಿ ಇದುವರೆಗೆ ಒಂದೂ ಅರ್ಧ ಶತಕ ದಾಖಲಿಸಿರಲಿಲ್ಲ. ಅದನ್ನು ಬೆಂಗಳೂರು ಪಂದ್ಯದಲ್ಲಿ ಮಾಡಿದರು.

ಇಷ್ಟು 11 ವರ್ಷಗಳಿಂದ ಟಿ20 ಕ್ರಿಕೆಟ್ ಆಡುತ್ತಿದ್ದರೂ ಅವರಿಗೆ ಒಂದೇ ಒಂದು ಅರ್ಧಶತಕ ದಾಖಲಿಸಲು ಸಾಧ್ಯವಾಗಿರಲಿಲ್ಲ ಎಂದರೆ ನಿಜಕ್ಕೂ ವಿಶೇಷವೇ. ಹಾಗಾಗಿ ಅವರು ನಾಯಕತ್ವ ಬಿಟ್ಟ ಮೇಲೆ ಒಬ್ಬ ಬ್ಯಾಟ್ಸ್ ಮನ್ ಆಗಿ ಏನೆಲ್ಲಾ ದಾಖಲೆ ಮಾಡಬಹುದೋ ಅದನ್ನೆಲ್ಲಾ ಮಾಡಬಹುದು ಎಂಬ ಕೊಹ್ಲಿ ಮಾತು ನಿಜವೆನಿಸುತ್ತದೆ.

ಇತ್ತೀಚೆಗೆ ನಡೆದ ಏಕದಿನ ಸರಣಿಯಲ್ಲೂ ಧೋನಿ ಕೆಲವು ದಾಖಲೆ ಮಾಡಿದ್ದರು. ಅಷ್ಟೇ ಅಲ್ಲ, ಟೀಂ ಇಂಡಿಯಾ ಬ್ಯಾಟಿಂಗ್ ನ ಬೆನ್ನುಲುಬಾಗಿ ನಿಂತಿದ್ದರು. ಇದುವರೆಗೆ ಧೋನಿ ಹೊಡೆ ಬಡಿಯ ಆಟಗಾರ ಎಂಬ ಖ್ಯಾತಿಯಿದ್ದರೂ ಪ್ರತೀ ಪಂದ್ಯದಲ್ಲಿ ಅಂತಹದ್ದೊಂದು ಇನಿಂಗ್ಸ್ ಕಟ್ಟಿದ ಉದಾಹರಣೆಯಿಲ್ಲ.

ಇದೀಗ ಒತ್ತಡವಿಲ್ಲದೇ ಕೇವಲ ಹಿರಿಯ ಆಟಗಾರನೆಂಬ ಹಣೆಪಟ್ಟಿ ಹೊತ್ತು ಆಡುವಾಗ ಅದೆಲ್ಲವನ್ನೂ ಮಾಡುತ್ತಿದ್ದಾರೆ. ಅವರ ಬ್ಯಾಟಿಂಗ್ ನಲ್ಲಿ ಹೆಲಿಕಾಫ್ಟರ್ ಶಾಟ್ ಗಳು ಕಡಿಮೆ ಇರಬಹುದು. ಆದರೆ ಭಾರತಕ್ಕೊಂದು ಉತ್ತಮ ವೇದಿಕೆ ನಿರ್ಮಿಸುವ ಹಪ ಹಪಿ ಎದ್ದು ಕಾಣುತ್ತದೆ.

ಇತ್ತೀಚೆಗೆ ಅವರು ಕ್ಲಿಕ್ ಆಗುತ್ತಿರುವ ಕಾರಣ ಬ್ಯಾಟಿಂಗ್ ನಲ್ಲಿ ಕೊಂಚ ಬಡ್ತಿ ನೀಡಬೇಕು. ಅವರು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಆಡುತ್ತಿದ್ದಂತೆ ಮೂರನೇ ಕ್ರಮಾಂಕದಲ್ಲಿ ಆಡಿಸಬೇಕು ಎಂದು ಹಲವೆಡೆಯಿಂದ ಒತ್ತಾಯ ಕೇಳಿಬರುತ್ತಿತ್ತು. ಈ ವಿಚಾರವನ್ನು ಸ್ವತಃ ಕೊಹ್ಲಿ ಕೂಡಾ ಧೋನಿಗೆ ಹೇಳಿದ್ದರಂತೆ.

ಆದರೆ ಮೇಲಿನ ಕ್ರಮಾಂಕದಲ್ಲಿ ಆಡುವ ಕೊಹ್ಲಿ ಸಲಹೆಯನ್ನು ನಯವಾಗಿಯೇ ಧೋನಿ ನಿರಾಕರಿಸಿದರಂತೆ. ಕಾರಣ ತಾನಿನ್ನೂ ಗೇಮ್ ಫಿನಿಶರ್ ಆಗಬೇಕೆಂಬುದು ಧೋನಿ ಬಯಕೆ. ಅಲ್ಲದೆ ಹಿರಿಯ ಆಟಗಾರನಾಗಿ ಕೊನೆಯಲ್ಲಿ ಬಂದು ತಂಡವನ್ನು ಆಧರಿಸುವ ಜವಾಬ್ದಾರಿ ತಮ್ಮದು ಎಂಬುದು ಅವರ ನಂಬಿಕೆ. ಹೀಗಾಗಿ ಅವರದೇ ಬಯಕೆಯಂತೆ ಐದನೇ ಕ್ರಮಾಂಕದಲ್ಲಿ ಆಡಲಿಳಿಯುತ್ತಿದ್ದಾರೆ.

ಕ್ರಮಾಂಕ ಎಷ್ಟೇ ಆಗಿರಲಿ, ಧೋನಿಯಂತಹ ಆಟಗಾರರಿಗೆ ಲೆಕ್ಕವೇ ಅಲ್ಲ. ನಾಯಕತ್ವವಿದ್ದರೆ ಮಾತ್ರ ತಂಡದಲ್ಲಿ ಅವರ ಜಾದೂ ನಡೆಯಬಹುದು. ನಾಯಕತ್ವ ಬಿಟ್ಟ ಮೇಲೆ ಧೋನಿ ಮೂಲೆಗುಂಪಾಗಬಹುದು ಎಂಬ ಲೆಕ್ಕಾಚಾರಗಳನ್ನೂ ಅವರು ತಲೆಕೆಳಗು ಮಾಡಿದ್ದಾರೆ. ಅದಕ್ಕೆ ಅವರು ವಿಕೆಟ್ ಹಿಂದುಗಡೆ ಬೌಲರ್ ಗಳಿಗೆ ಬ್ಯಾಟ್ಸ್ ಮನ್ ಭವಿಷ್ಯ ಹೇಳುತ್ತಾ, ಫೀಲ್ಡಿಂಗ್ ಸೆಟ್ ಮಾಡುತ್ತಾ ಆಡುತ್ತಿರುವುದೇ ಸಾಕ್ಷಿ.

ಖಂಡಿತವಾಗಿಯೂ ಧೋನಿ ಆಡುತ್ತಿರುವುದು ನೋಡಿದರೆ ತಮ್ಮ ವೃತ್ತಿ ಜೀವನದ ಸಂಧ್ಯಾ ಕಾಲದಲ್ಲಿ ಬ್ಯಾಟಿಂಗ್ ಮೂಲಕ ತಾವು ಇದುವರೆಗೆ ಸಾಧಿಸದೇ ಇರುವುದನ್ನು, ಇನ್ನು ಸಾಧಿಸಬೇಕೆಂದು ಅಂದುಕೊಂಡಿರುವುದಂತೂ ನಿಜವೆನಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಕ್ರಿಕೆಟ್ ಪ್ರಿಯರಿಗೆ ಬಿಸಿಸಿಐ ನೀಡಿದ ಸಿಹಿ ಸುದ್ದಿ!