Publish Date: Sun, 08 Jan 2017 (06:43 IST)
Updated Date: Sun, 08 Jan 2017 (06:46 IST)
ನವದೆಹಲಿ: ವಿರಾಟ್ ಕೊಹ್ಲಿ ಅಲೆಯಲ್ಲಿ ಧೋನಿ ಕೊಚ್ಚಿ ಹೋದರು ಎಂದು ಹಲವರು ಹೇಳಬಹುದು. ಆದರೆ ಕೊಹ್ಲಿಗೆ ಮಾತ್ರ ಧೋನಿಯೇ ನಾಯಕನಂತೆ. ಆತ ಹಲವು ಬಾರಿ ನಾನು ತಂಡದಿಂದ ಕೊಕ್ ಆಗದಂತೆ ಕಾಪಾಡಿದರು ಎಂದು ಟೀಂ ಇಂಡಿಯಾ ನಾಯಕ ಹೇಳಿಕೊಂಡಿದ್ದಾರೆ.
ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಬಿಚ್ಚಿಟ್ಟ ಕೊಹ್ಲಿ, “ನನಗೆ ಅವರು ಯಾವತ್ತಿಗೂ ನಾಯಕ. ಯಾಕೆಂದರೆ ಅವರ ಅಡಿಯಲ್ಲೇ ನಾನು ವೃತ್ತಿ ಜೀವನ ಆರಂಭಿಸಿದೆ. ನನಗೆ ಆರಂಭದಲ್ಲಿ ಸಾಕಷ್ಟು ಸಲಹೆ ನೀಡಿದರು. ನಾನು ಬೆಳೆಯಲು ಸಾಕಷ್ಟು ಸಮಯ ನೀಡಿದರು. ನಾನು ತಂಡದಿಂದ ಕೊಕ್ ಆಗುವ ಅಪಾಯವಿದ್ದಾಗಲೆಲ್ಲಾ ಕಾಪಾಡಿದರು” ಎಂದು ಹೇಳಿದ್ದಾರೆ.
ಧೋನಿಯಿಂದ ತೆರವಾದ ಸ್ಥಾನಕ್ಕೆ ಕೊಹ್ಲಿಯನ್ನು ನೇಮಿಸಲಾಗಿದೆ. ಆದರೂ ಧೋನಿ ಎಂದರೆ ನನ್ನ ಮನಸ್ಸಿಗೆ ಬರುವ ಮೊದಲ ಶಬ್ಧ ಕ್ಯಾಪ್ಟನ್ ಆಗಿದೆ ಎಂದು ಕೊಹ್ಲಿ ಧೋನಿ ಗುಣಗಾನ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ