ನವದೆಹಲಿ: ದೆಹಲಿಯಲ್ಲಿ ಹೋಟೆಲ್ ಗೆ ಬೆಂಕಿ ತಗುಲಿದಾಗ ತಮ್ಮ ಫೋನ್ ಕಳೆದುಕೊಂಡಿದ್ದ ಕ್ರಿಕೆಟಿಗ ಧೋನಿ ಕೊನೆಗೂ ನಿಟ್ಟುಸಿರುಬಿಟ್ಟಿದ್ದಾರೆ. ಫೋನ್ ಸಹಿತ ಕಳ್ಳತನ ಮಾಡಿದ ವ್ಯಕ್ತಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಹೋಟೆಲ್ ಗೆ ಬೆಂಕಿ ತಗುಲಿದಾಗ ಧೋನಿ ತಮ್ಮ ಕೆಲವು ವಸ್ತುಗಳನ್ನು ಬಿಟ್ಟು ಹೊರಗೆ ಓಡಿದ್ದರು. ಬೆಂಕಿ ನಂದಿದ ಮೇಲೆ ವಾಪಸ್ ಹೋಟೆಲ್ ಕೊಠಡಿಗೆ ತಮ್ಮ ವಸ್ತುಗಳನ್ನು ತೆಗೆದುಕೊಳ್ಳಲು ಬಂದಾಗ ಬೆಲೆ ಬಾಳುವ ಐಫೋನ್ ಸೇರಿದಂತೆ ಕೆಲವು ವಸ್ತುಗಳು ಕಾಣೆಯಾಗಿರುವುದು ಬೆಳಕಿಗೆ ಬಂತು.
ಕೂಡಲೇ ಪೊಲೀಸರಿಗೆ ಧೋನಿ ನೀಡಿದ್ದರು. ಎಫ್ ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ವ್ಯಕ್ತಿಯನ್ನು ಬಂಧಿಸಿದ್ದು, ಸುರಕ್ಷಿತವಾಗಿ ಧೋನಿಗೆ ಫೋನ್ ಮರಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ