Select Your Language

Notifications

webdunia
webdunia
webdunia
webdunia

ನಿನ್ನೆಯ ಪಂದ್ಯದೊಂದಿಗೆ ಮಹೇಂದ್ರ ಸಿಂಗ್ ಧೋನಿ ಹೆಸರೇ ಬದಲಾಯ್ತು!

ನಿನ್ನೆಯ ಪಂದ್ಯದೊಂದಿಗೆ ಮಹೇಂದ್ರ ಸಿಂಗ್ ಧೋನಿ ಹೆಸರೇ ಬದಲಾಯ್ತು!
London , ಶುಕ್ರವಾರ, 9 ಜೂನ್ 2017 (08:25 IST)
ಲಂಡನ್: ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರು ಎಂದರೆ ಎಲ್ಲರೂ ಧೋನಿ ಹೆಸರೇ ಹೇಳುತ್ತಾರೆ. ಆದರೆ ಅವರನ್ನು ಇನ್ನು ಧೋನಿ ಎಂದು ಕರೆಯುವ ಬದಲು ಹೊಸ ಹೆಸರಿನಿಂದ ಕೂಗಬಹುದು. ಅವರಿಗೊಂದು ಹೊಸ ಹೆಸರು ಸಿಕ್ಕಿದೆ.

 
ಅದೇನದು? ಅಷ್ಟಕ್ಕೂ ಈ ಹೆಸರು ಬದಲಾವಣೆ ಮಾಡಿದ್ದು, ಧೋನಿ ಮನೆಯವರಾಗಲೀ, ಸ್ವತಃ ಧೋನಿಯಾಗಲೀ ಅಲ್ಲ. ಸಹ ಆಟಗಾರರೂ ಅಲ್ಲ. ದಿ ಒನ್ ಆಂಡ್ ಓನ್ಲೀ ವೀರೇಂದ್ರ ಸೆಹ್ವಾಗ್!

ಧೋನಿಗೆ ಹೊಸದಾಗಿ ನಾಮಕರಣ ಮಾಡಿದವರು ಸೆಹ್ವಾಗ್. ನಿನ್ನೆ ಭಾರತ ಪಂದ್ಯ ಸೋತರೇನಂತೆ? ಧೋನಿ ಭರ್ಜರಿ ಬ್ಯಾಟಿಂಗ್ ನಡೆಸಿ ಅರ್ಧಶತಕ ಗಳಿಸಿದ್ದರು. ಇದರಲ್ಲಿ ಮನಮೋಹಕ ಬೌಂಡರಿ, ಸಿಕ್ಸರ್ ಗಳಿದ್ದವು. ಇದನ್ನೆಲ್ಲಾ ನೋಡಿದ ಮೇಲೆ ಕಾಮೆಂಟರಿ ಮಾಡುತ್ತಿದ್ದ ಸೆಹ್ವಾಗ್ ಧೋನಿಗೊಂದು ಹೊಸ ಹೆಸರಿಟ್ಟಿದ್ದಾರೆ.

ಮಹೇಂದ್ರ ಬಾಹುಬಲಿ! ಹೌದು. ಧೋನಿಯನ್ನು ತಮ್ಮ ಕಾಮೆಂಟರಿಯುದ್ದಕ್ಕೂ ಸೆಹ್ವಾಗ್ ಮಹೇಂದ್ರ ಸಿಂಗ್ ಧೋನಿ ಎನ್ನುವ ಬದಲು ಅವರ ಸಿಡಿಲಬ್ಬರದ ಬ್ಯಾಟಿಂಗ್ ಗೆ ತಕ್ಕುದಾಗಿ ಮಹೇಂದ್ರ ಬಾಹುಬಲಿ ಎನ್ನುತ್ತಿದ್ದರು. ಮಹೇಂದ್ರ ಬಾಹುಬಲಿ ಎಂದರೆ ಬಾಹುಬಲಿ ಸಿನಿಮಾದಲ್ಲಿ ಬರುವ ನಾಯಕನ ಪಾತ್ರದ ಹೆಸರು. ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ದಾಖಲೆ ಬರೆದಿತ್ತು. ಇದೀಗ ಧೋನಿಗೆ ಆ ಹೆಸರಿಡಲಾಗಿದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫ್ರೆಂಚ್ ಓಪನ್ ಟೆನ್ನಿಸ್ ಮಿಶ್ರ ಡಬಲ್ಸ್ ಕಿರೀಟ ಮುಡಿಗೇರಿಸಿಕೊಂಡ ರೋಹನ್ ಬೋಪಣ್ಣ