ರಾಂಚಿ: ಅರೇ ಧೋನಿ ಇನ್ನೂ ಟೀಂ ಇಂಡಿಯಾದಲ್ಲೇ ಇದ್ದಾರಲ್ವಾ? ಮತ್ತೆ ಯಾಕೆ ರಾಜ್ಯದ ತಂಡದಲ್ಲಿ ಆಡ್ತಾರೆ? ಹಾಗಿದ್ದರೆ ಇನ್ನು ಟೀಂ ಇಂಡಿಯಾದಲ್ಲಿ ಆಡಲ್ವಾ? ಎಂದೆಲ್ಲಾ ಕನ್ ಫ್ಯೂಸ್ ಆಗಬೇಡಿ.
ಫೆಬ್ರವರಿ 5 ರಿಂದ ಪ್ರಾರಂಭವಾಗಲಿರುವ ಸೈಯದ್ ಮುಷ್ತಾಕ್ ಆಲಿ ಟಿ20 ಪಂದ್ಯಾವಳಿಯಲ್ಲಿ ಧೋನಿ ತಮ್ಮ ರಾಜ್ಯ ಜಾರ್ಖಂಡ್ ಪರ ಆಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಫೆಬ್ರವರಿ 1 ರಂದು ಇಂಗ್ಲೆಂಡ್ ಸರಣಿ ಮುಕ್ತಾಯಗೊಳ್ಳಲಿದೆ. ನಂತರ ಭಾರತ ತಂಡ ಕಿರು ಮಾದರಿಯ ಪಂದ್ಯ ಆಡುವುದು ಜೂನ್ ನಲ್ಲೇ.
ಹೀಗಾಗಿ ಬೆಂಗಳೂರಿನ ಪಂದ್ಯ ಮುಗಿಸಿಕೊಂಡು ಧೋನಿ ದೇಶೀಯ ಟಿ20 ಟೂರ್ನಿಗಾಗಿ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ಆದರೂ ಧೋನಿ ಇನ್ನೂ ಇದನ್ನು ಖಚಿತಪಡಿಸಬೇಕಾಗಿದೆ. ಸಮಯ ಸಿಕ್ಕಾಗಲೆಲ್ಲಾ ಧೋನಿ ತಮ್ಮ ತವರು ತಂಡದ ಸಲಹೆಗಾರನಾಗಿ ಕಾರ್ಯನಿವರ್ವಹಿಸುತ್ತಾರೆ. ಇದೀಗ ಆಡಲು ಕಣಕ್ಕಿಳಿಯುತ್ತಾರಾ ಎಂದು ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ