Select Your Language

Notifications

webdunia
webdunia
webdunia
webdunia

ಒಪ್ಪಂದ ಮುಗಿದರೂ ಹೆಸರು ದುರುಪಯೋಗಪಡಿಸುತ್ತಿರುವುದಕ್ಕೆ ಮೊಬೈಲ್ ಕಂಪನಿ ವಿರುದ್ಧ ಧೋನಿ ಗರಂ

ಒಪ್ಪಂದ ಮುಗಿದರೂ ಹೆಸರು ದುರುಪಯೋಗಪಡಿಸುತ್ತಿರುವುದಕ್ಕೆ ಮೊಬೈಲ್ ಕಂಪನಿ ವಿರುದ್ಧ ಧೋನಿ ಗರಂ
NewDelhi , ಭಾನುವಾರ, 29 ಜನವರಿ 2017 (11:55 IST)
ನವದೆಹಲಿ: ನಾಲ್ಕು ವರ್ಷ ಹಿಂದೆಯೇ ರಾಯಭಾರಿ ಒಪ್ಪಂದ ಮುಗಿದರೂ, ತನ್ನ ಹೆಸರನ್ನು ಇನ್ನೂ ಬಳಸುತ್ತಿರುವ ಮೊಬೈಲ್ ಕಂಪನಿಯೊಂದರ ವಿರುದ್ಧ ಕ್ರಿಕೆಟಿಗ ಧೋನಿ ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

 
ಮ್ಯಾಕ್ಸ್ ಮೊಬಿಲಿಂಕ್ ಪ್ರೈ ಲಿಮಿಟೆಡ್ ಸಂಸ್ಥೆ ಧೋನಿ ಹೆಸರನ್ನು ಅಕ್ರಮವಾಗಿ ಬಳಸುತ್ತಿದೆ ಎಂಬುದು ಆರೋಪ. ಮುಂದಿನ ವಿಚಾರಣೆವರೆಗೆ ಏಪ್ರಿಲ್ 2016 ರಲ್ಲಿ ಉಭಯ ಪಕ್ಷಗಳು ಒಪ್ಪಿಕೊಂಡಂತೆ ಧೋನಿ ಹೆಸರನ್ನು ಯಾವುದೇ ವಿಚಾರಕ್ಕೂ ಬಳಸಿಕೊಳ್ಳಬಾರದು ಎಂದು ನ್ಯಾಯಾಲಯ ಆದೇಶ ನೀಡಿದೆ.

ಧೋನಿಯ ಹೆಸರು ಹೇಳಿಕೊಂಡು ಸಂಸ್ಥೆ ಯಾವುದೇ ಉತ್ಪನ್ನವನ್ನು ಮಾರಟ ಮಾಡಬಾರದು ಎಂದು ನ್ಯಾಯಾಲಯ  ನಿರ್ದೇಶನ ನೀಡಿದೆ. ಧೋನಿ ಈ ಪ್ರಕರಣದ ಬಗ್ಗೆ ಎರಡು ವರ್ಷದ ಹಿಂದೆಯೇ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಆದರೂ ಸಂಸ್ಥೆ ತನ್ನ ಚಾಳಿ ಮುಂದುವರಿಸಿದ ಕಾರಣ ಮತ್ತೆ ವಕೀಲರ ಮೂಲಕ ನ್ಯಾಯಾಲಯಕ್ಕೆ ದೂರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೋತು ಸುಣ್ಣವಾಗಿ ಮರಳಿದ ಪಾಕ್ ಕ್ರಿಕೆಟ್ ತಂಡಕ್ಕೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಹೀಗಿತ್ತು ನೋಡಿ