Publish Date: Fri, 16 Jul 2021 (10:11 IST)
Updated Date: Fri, 16 Jul 2021 (10:13 IST)
ಕೊಲೊಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಯುವ ಟೀಂ ಇಂಡಿಯಾ ಕ್ರಿಕಟಿಗರಿಗೆ ಈಗ ಕೋಚ್ ರಾಹುಲ್ ದ್ರಾವಿಡ್ ಆಪತ್ಬಾಂಧವ. ತಮ್ಮ ನೆಚ್ಚಿನ ತಾರೆಯೇ ಕೋಚ್ ಆಗಿ ಬಂದ ಖುಷಿಯಲ್ಲಿ ಕ್ರಿಕೆಟಿಗರಿದ್ದಾರೆ.
ಈ ನಡುವೆ ಕನ್ನಡಿಗ ಕ್ರಿಕೆಟಿಗ ದೇವದತ್ತ್ ಪಡಿಕ್ಕಲ್ ಮೊದಲ ಬಾರಿಗೆ ದ್ರಾವಿಡ್ ರನ್ನು ಭೇಟಿ ಮಾಡಿದ ಅನುಭವ ಹಂಚಿಕೊಂಡಿದ್ದಾರೆ. ಮತ್ತು ಈಗ ಅವರದೇ ಕೋಚಿಂಗ್ ನಲ್ಲಿ ಆಡುತ್ತಿರುವುದು ಕ್ರಿಕೆಟಿಗರಿಗೆ ವಿಶೇಷ ಅನುಭವ ಕೊಡುತ್ತಿದೆಯಂತೆ.
ನಾನು ಮೊದಲ ಬಾರಿಗೆ ದ್ರಾವಿಡ್ ಸರ್ ಭೇಟಿಯಾಗಿದ್ದು ಚಿಕ್ಕವನಿದ್ದಾಗ ಶಾಲೆಯಲ್ಲಿ. ಅಲ್ಲಿಗೆ ಅವರು ಅತಿಥಿಯಾಗಿ ಬಂದಿದ್ದಾಗ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ್ದೆ. ಆಗಲೇ ನಾನು ಅವರನ್ನು ನೋಡಿ ಬೆರಗಾಗಿದ್ದೆ. ಈಗ ಅವರ ಕೋಚಿಂಗ್ ನಲ್ಲಿ ಆಡುವುದು ವಿಶೇಷ ಅನುಭವ. ಅವರಿಂದ ಕಲಿಯುವುದು ಸಾಕಷ್ಟಿದೆ. ಅವರು ಕೋಚ್ ಆಗಿ ನಮಗೆ ಸಿಕ್ಕಿರುವುದೇ ನಮ್ಮ ಪುಣ್ಯ ಎಂದು ದೇವದತ್ತ್ ಹೊಗಳಿದ್ದಾರೆ.