Publish Date: Fri, 15 Jul 2016 (14:00 IST)
Updated Date: Fri, 15 Jul 2016 (14:05 IST)
ಲಂಡನ್: ಇಂಗ್ಲೆಂಡ್ ಮಾಜಿ ಬ್ಯಾಟ್ಸ್‌ಮನ್ ಮೈಕೇಲ್ ಕಾರ್‌ಬೆರಿ ಅವರಿಗೆ ಕ್ಯಾನ್ಸರ್ ಕಾಯಿಲೆ ಗುರುತಿಸಲಾಗಿದೆ ಎಂದು ಹ್ಯಾಂಪ್‌ಶೈಟ್ ಕೌಂಟಿ ಕ್ರಿಕೆಟ್ ಕ್ಲಬ್ ತಿಳಿಸಿದೆ.
35 ವರ್ಷದ ಎಡಗೈ ಆಟಗಾರ ಮಂಗಳವಾರ ಅಸ್ವಸ್ಥತೆಯಿಂದ ವಾರ್ವಿಕ್‌ಶೈರ್ ವಿರುದ್ಧ ಚಾಂಪಿಯನ್‌ಶಿಪ್ ಪಂದ್ಯ ಮಿಸ್ ಮಾಡಿಕೊಂಡಿದ್ದರು.
ಮೈಕೇಲ್ 10 ವರ್ಷಗಳ ಕಾಲ ಹ್ಯಾಂಪ್‌ಶೈರ್ ಕ್ರಿಕೆಟ್ ಕುಟುಂಬದ ಭಾಗವಾಗಿದ್ದು, ಅವರಿಗೆ ಮತ್ತು ಅವರ ಕುಟುಂಬಕ್ಕೆ ಇಂತಹ ಸಂಕಷ್ಟದ ಕಾಲದಲ್ಲಿ ಶಕ್ತಿ ತುಂಬಲಿ ಎಂದು ಅಧ್ಯಕ್ಷ ರಾಡ್ ಬ್ರಾನ್ಸ್‌ಗ್ರೋವ್ ತಿಳಿಸಿದರು.
ಕಾರ್‌ಬೆರಿ ಮುಂಚೆ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ 2011ರ ಸೀಸನ್ ಮಿಸ್ ಮಾಡಿಕೊಂಡಿದ್ದರು. ಕಾರ್‌ಬೆರಿ ಇಂಗ್ಲೆಂಡ್ ಪರ ಟೆಸ್ಟ್, ಏಕ ದಿನ ಮತ್ತು ಟ್ವೆಂಟಿ 20ಗಳಲ್ಲಿ ಆಡಿದ್ದರು. 2014ರ ಮೇನಲ್ಲಿ ಶ್ರೀಲಂಕಾ ವಿರುದ್ದ ಏಕದಿನ ಸರಣಿಯನ್ನು ಕೊನೆಯದಾಗಿ ಆಡಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.