ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಭಾನುವಾರ ಐಪಿಎಲ್ 2016ರ ಅತ್ಯಧಿಕ ವಿಕೆಟ್ ಕಬಳಿಸಿದ ಭುವನೇಶ್ವರ್ ಕುಮಾರ್ ಅವರನ್ನು ವಿಶ್ವದರ್ಜೆಯ ಆಟಗಾರ ಎಂದು ಹೊಗಳಿದ್ದಾರೆ. ಭುವಿ ಭಾರತ ತಂಡದ ಒಳಗೆ, ಹೊರಗೆ ಆಗಾಗ್ಗೆ ಇದ್ದರೂ ಅವರು ವಿಶ್ವದರ್ಜೆಯ ಆಟಗಾರ ಎಂದು ಶ್ಲಾಘಿಸಿದರು.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ತಂಡದ ನಾಯಕನಾಗಿ ಭುವನೇಶ್ವರ್ ಸಾಮರ್ಥ್ಯ ಮತ್ತು ಆಟದ ಬಗ್ಗೆ ಅವರಿಗಿರುವ ಅಭಿಲಾಷೆ ಕುರಿತು ತಮಗೆ ಸಂಪೂರ್ಣ ನಂಬಿಕೆಯಿತ್ತು ಎಂದು ವಾರ್ನರ್ ಹೇಳಿದರು.
ವಾರ್ನರ್ 38 ಎಸೆತಗಳಲ್ಲಿ 69 ರನ್ ಹೊಡೆದು ತಂಡದ ಸ್ಕೋರ್ ವೇಗ ಹೆಚ್ಚಿಸಿದರು. ಆದರೆ ಭುವನೇಶ್ವರ್ ಮತ್ತು ಮುಸ್ತಫಿಜುರ್ ರೆಹ್ಮಾನ್ ಡೆತ್ ಓವರ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿ ಬೆಂಗಳೂರು ತಂಡದ ವಿರುದ್ಧ 8 ರನ್ ಜಯವನ್ನು ತಂದಿತ್ತಿದ್ದರು.
ಯುವ ಎಡಗೈ ವೇಗಿ ಮುಸ್ತಫಿಜುರ್ ಅವರನ್ನು ಕೂಡ ವಾರ್ನರ್ ಶ್ಲಾಘಿಸಿ ಭುವನೇಶ್ವರ್ ಜತೆ ಮಾರಕ ಜೋಡಿಯಾಗಿದ್ದರು ಎಂದು ಹೇಳಿದರು.
ಸನ್ ರೈಸರ್ಸ್ 208 ರನ್ ಬೆನ್ನೆತ್ತಿದ ಆರ್‌ಸಿಬಿ ಒಂದು ಹಂತದಲ್ಲಿ 114ಕ್ಕೆ ನೋಲಾಸ್‌ನೊಂದಿಗೆ ಕ್ರಿಸ್ ಗೇಲ್ ಸಿಡಿಲಬ್ಬರದ ಬ್ಯಾಟಿಂಗ್ ಆಡಿದ್ದರು. ನಾನು ಬೌಲರುಗಳಿಗೆ ವೈಡ್ ಮತ್ತು ಸ್ಲೋ ಬಾಲ್ ಎಸೆಯುವಂತೆ ಹೇಳಿದ್ದೆ. ಆದರೂ ಗೇಲ್ ಅತ್ಯಂತ ಶಕ್ತಿಶಾಲಿಯಾಗಿ ಚೆಂಡನ್ನು ಬೌಂಡರಿಗೆ ಅಟ್ಟುತ್ತಿದ್ದರು. ನಾವು ಬೇಗನೇ ವಿಕೆಟ್ ಕಬಳಿಸಿದರೆ ಮುಂದಿನ ಬ್ಯಾಟ್ಸ್‌ಮನ್ ಶಾಟ್‌ಗಳನ್ನು ಹೊಡೆಯುವುದು ಕಷ್ಟವಾಗುತ್ತದೆಂದು ನಮಗೆ ಗೊತ್ತಿತ್ತು ಎಂದು ಗೇಲ್ ರನ್ ಬೆನ್ನಟ್ಟುವಾಗ ಅವರ ಕಾರ್ಯತಂತ್ರ ಕುರಿತು ಪ್ರಶ್ನಿಸಿದಾಗ ಉತ್ತರಿಸಿದರು.
ಎದುರಾಳಿ ನಾಯಕ ಮತ್ತು ಐಪಿಎಲ್ ಕಿತ್ತಲೆ ಕ್ಯಾಪ್ ವಿಜೇತ ವಿರಾಟ್ ಕೊಹ್ಲಿ ಅವರನ್ನು ಮಹಾನ್ ನಾಯಕ ಎಂದು ವಾರ್ನರ್ ಹೊಗಳಿದರು. ತಮ್ಮ ಚೊಚ್ಚಲ ಐಪಿಎಲ್ ಗೆಲುವನ್ನು ಸಂಪೂರ್ಣ ತಂಡದ ಪ್ರಯತ್ನ ಎಂದು ಅವರು ಹೇಳಿದರು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.