Select Your Language

Notifications

webdunia
webdunia
webdunia
webdunia

ಯಶಸ್ವೀ ವೈವಾಹಿಕ ಜೀವನದ ಗುಟ್ಟು ಬಿಚ್ಚಿಟ್ಟ ಕ್ರಿಕೆಟಿಗ ಸೆಹ್ವಾಗ್!

ಯಶಸ್ವೀ ವೈವಾಹಿಕ ಜೀವನದ ಗುಟ್ಟು ಬಿಚ್ಚಿಟ್ಟ ಕ್ರಿಕೆಟಿಗ ಸೆಹ್ವಾಗ್!
NewDelhi , ಗುರುವಾರ, 18 ಮೇ 2017 (06:58 IST)
ನವದೆಹಲಿ: ಕ್ರಿಕೆಟಗ ವೀರೇಂದ್ರ ಸೆಹ್ವಾಗ್ ಟ್ವಿಟರ್ ಮತ್ತೆ ಸದ್ದು ಮಾಡಲಾರಂಭಿಸಿದೆ. ಮತ್ತೊಮ್ಮೆ ರಸವತ್ತಾದ ಟ್ವೀಟ್ ಮಾಡಿರುವ ವೀರೂ ತಮ್ಮ ಯಶಸ್ವೀ ವೈವಾಹಿಕ ಜೀವನದ ಗುಟ್ಟು ಬಿಚ್ಚಿಟ್ಟಿದ್ದಾರೆ.

 
ಪತ್ನಿ ಖುಷಿಯಾಗಿದ್ದರೆ ಜೀವನವೂ ಖುಷಿ ಎಂದು ತಮ್ಮ ಅನುಭವವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಪುಣೆ ರೈಸರ್ಸ್ ಮತ್ತು ಮುಂಬೈ ನಡುವಣ ಕ್ವಾಲಿಫೈಯರ್ ಪಂದ್ಯವಿರುವಾಗ ವೀರೂ ಪತ್ನಿ ಆರತಿ ಸಿನಿಮಾ ನೋಡೋಣವೆಂದು ಒತ್ತಾಯಿಸಿದರಂತೆ.

ಪತ್ನಿಗೆ ಬೇಡವೆಂದರೆ ಆಕೆ ಕೋಪಿಸಿಕೊಳ್ಳಬಹುದು. ಹೋದರೆ ಅದ್ಭುತ ಪಂದ್ಯವೊಂದು ಮಿಸ್ ಆಗುತ್ತದೆ ಎನ್ನುವ ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡಂತಹ ಪರಿಸ್ಥಿತಿ ವೀರೂದು. ಅದಕ್ಕೆ ಅವರು ಮಾಡಿದ್ದೇನು ಗೊತ್ತೇ?

ನೇರ ಪತ್ನಿಯನ್ನು ಸಿನಿಮಾ ಹಾಲ್ ಗೆ ಕರೆದುಕೊಂಡು ಬಂದು ಆಕೆಯ ಪಕ್ಕ ಕೂತರಂತೆ. ನಂತರ ಮೆತ್ತಗೆ ತಮ್ಮ ಮೊಬೈಲ್ ಹೊರತೆಗೆದು ಅದರಲ್ಲಿ ಐಪಿಎಲ್ ಪಂದ್ಯದ ನೇರಪ್ರಸಾರ ವೀಕ್ಷಿಸಿದರಂತೆ. ಅಲ್ಲಿಗೆ ಇಬ್ಬರ ಬಯಕೆಯೂ ನೆರವೇರಿದಂತಾಯಿತು. ವೀರೂ ಐಡಿಯಾಕ್ಕೆ ಭಾರೀ ಪ್ರಶಂಸೆಯೂ ಬಂದಿದೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳಿಗೆ ಸಾರಿ, ಮತ್ತೆ ಬರ್ತೀವಿ ಎಂದು ಸಂದೇಶಕೊಟ್ಟ ವಿರಾಟ್ ಕೊಹ್ಲಿ