ಕುಟುಂಬದ ಜತೆ 'ವಿದ್ಯಾರ್ಥಿ ಭವನ'ದ ದೋಸೆ ಸವಿದ ಕ್ರಿಕೆಟಿಗ ಅನಿಲ್ ಕುಂಬ್ಳೆ

Sampriya
ಭಾನುವಾರ, 28 ಏಪ್ರಿಲ್ 2024 (17:49 IST)
ಬೆಂಗಳೂರು: ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ತಮ್ಮ ಸರಳ ನಡವಳಿಕೆ ಮೂಲಕ ಯಾವಾಗಲೂ ಮೆಚ್ಚುಗೆ ಗಳಿಸುತ್ತಲೇ ಇರುತ್ತಾರೆ.

ಇದೀಗ ತಮ್ಮ ಕುಟುಂಬದೊಂದಿಗೆ ವಿದ್ಯಾರ್ಥಿ ಭವನಕ್ಕೆ ಆಗಮಿಸಿದ ಕುಂಬ್ಲೆ ಅವರು ದೋಸೆ ಸವಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿದ್ಯಾರ್ಥಿ ಭವನದ ಎಕ್ಸ್‌ ಖಾತೆಯಲ್ಲಿ ಫೋಟೋ ಹಂಚಿಕೊಂಡ   ಅವರು, ಇಂದು ವಿದ್ಯಾರ್ಥಿ ಭವನದಲ್ಲಿ ಸುಂದರ ಜೋಡಿಯನ್ನು ನೋಡಿ ಸಂತೋಷವಾಯಿತು ಎಂದು ಹೇಳಿದೆ.

ಬೆಂಗಳೂರಿನ ಗಾಂಧೀ ಬಜಾರ್ ಬಡಾವಣೆಯಲ್ಲಿರುವ ವಿದ್ಯಾರ್ಥಿ ಭವನ 70 ವರ್ಷಕ್ಕಿಂತ ಹಳೆಯದಾದ ಸಸ್ಯಾಹಾರಿ ಹೋಟೆಲ್‌ ಆಗಿದ್ದು ಈಗಲೂ ಜನಪ್ರಿಯತೆ ಮತ್ತು ಗುಣಮಟ್ಟವನ್ನು ಉಳಿಸಿಕೊಂಡು ಬಂದಿದೆ. ಭಾರತ ಸೇರಿದಂತೆ ವಿದೇಶದ ಹಲವು ಗಣ್ಯರು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಆಹಾರ ಸೇವಿಸುತ್ತಾರೆ.

ನಗರದ ಪ್ರಸಿದ್ಧ ವಿದ್ಯಾರ್ಥಿ ಭವನ ಹೊಟೇಲ್‌ನ ತಿಂಡಿಯನ್ನು ಅನೇಕ ಮಂದಿ ಗಣ್ಯರು ಇಷ್ಟಪಟ್ಟು, ನಗರಕ್ಕೆ ಬಂದ ವೇಳೆ ಭೇಟಿ ಕೊಟ್ಟು ಆಹಾರವನ್ನು ಸವಿಯುತ್ತಾರೆ. ತುಂಬಾನೇ ಹೆಸರು ವಾಸಿಯಾಗಿರುವ ವಿದ್ಯಾರ್ಥಿ ಭವನ ತನ್ನದೇ ಆದ ರುಚಿಯೊಂದಿಗೆ ಇಂದಿಗೂ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಸ್ಪಿನ್ನರ್ ಗಳಿಂದ ಬಚಾವ್ ಆದ ಟೀಂ ಇಂಡಿಯಾ

IND vs SA: ಕೊಹ್ಲಿ, ರೋಹಿತ್ ಇಲ್ಲದ ಟೀಂ ಇಂಡಿಯಾ ಟೆಸ್ಟ್ ಮ್ಯಾಚ್ ನೋಡೋರೇ ಇಲ್ಲ

IND vs SA: ಕ್ಯಾಪ್ಟನ್ ಬದಲಾದರೂ ಟೀಂ ಇಂಡಿಯಾದ ಟಾಸ್ ಅದೃಷ್ಟ ಮಾತ್ರ ಬದಲಾಗಿಲ್ಲ

IND vs SA: ಕ್ಯಾಪ್ಟನ್ ಆಗಿ ಹೊಸ ದಾಖಲೆ ಮಾಡಲಿದ್ದಾರೆ ರಿಷಭ್ ಪಂತ್

ಹಳದಿ ಸಂಭ್ರಮದಲ್ಲಿರುವ ಸ್ಮೃತಿ ಮಂಧಾನಳನ್ನು ಕುಣಿಸಿದ ಟೀಂ ಇಂಡಿಯಾ ಆಟಗಾರ್ತಿಯರು, video

ಮುಂದಿನ ಸುದ್ದಿ
Show comments