ಆನ್ ಫಿಲ್ಡ್‌ನಲ್ಲಿ ಬ್ಯಾಟ್ ಬೀಸಿ ಸದಾ ಸುದ್ದಿಯಾಗುವ ಕ್ರಿಕೆಟ್‌ನ ಯೂನಿವರ್ಸಲ್ ಬಾಸ್ ಮೈದಾನದ ಹೊರಗೂ ಸುದ್ದಿ ಸೃಷ್ಟಿಸುತ್ತಲೇ ಇರುತ್ತಾರೆ. ಕಲರ್ ಫುಲ್ ಲೈಫ್‌ಗೆ ಇನ್ನೊಂದು ಹೆಸರೇ ಗೇಲ್. ಸದಾ ಮೋಜು ಮಸ್ತಿಗಳಲ್ಲಿಯೇ ಮುಳುಗಿರುವ ಅವರು ಈಗ ಫೇಸ್‌ಬುಕ್‌ನಲ್ಲಿ ಪೋಲಿತನ ಮೆರೆದಿದ್ದಾರೆ.
ಹೌದು, ಕ್ರಿಕೆಟ್‌ನ 'ಯೂನಿವರ್ಸಲ್ ಬಾಸ್' ಎಂದು ಕರೆಸಿಕೊಳ್ಳುವ ಈ ಕೆರೆಬಿಯನ್ ಕಿಂಗ್ ಸೆಪ್ಟೆಂಬರ್ 21 ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಂದು ಅವರೇನನ್ನು ಬಯಸಿದ್ದಾರೆ ಗೊತ್ತೇ? ಸದಾ ಎಣ್ಣೆ ಮತ್ತಿನಲ್ಲಿ ತೇಲಾಡುವ ಸಿಕ್ಸರ್ ಕಿಂಗ್ ತಮ್ಮಜನ್ಮದಿನದಂದು ಲಲನೆಯರನ್ನು ಬಯಸಿದ್ದಾರೆ. ನನ್ನ ಜತೆ ಸ್ಮಿಮ್ ಮಾಡಲು ಹುಡುಗಿಯರು ಬೇಕೆಂದು ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಹಾಕಿ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ ಗೇಲ್.
ಹುಡುಗಿಯರಂದ್ರೆ ನನಗೆ ತುಂಬಾ ಇಷ್ಟ. ಹೀಗಾಗಿ ನಾನು ಹೋದಲ್ಲೆಲ್ಲ ಹುಡುಗಿಯರು ನನ್ನನ್ನು ಮುತ್ತಿಕೊಳ್ಳುತ್ತಾರೆ ಎಂದು ಗೇಲ್ ತಮ್ಮ ಆಟೋಬಯಾಗ್ರಫಿಯಲ್ಲಿ ಬರೆದುಕೊಂಡಿದ್ದು ನಿಮಗೆ ಗೊತ್ತೇ ಇರಲಿಕ್ಕೆ ಸಾಕು. ಸದಾ ಗುಂಪು ಗುಂಪು ಹುಡುಗಿಯರ ಮಧ್ಯೆ ಕಾಣಿಸಿಕೊಳ್ಳುವ ಅವರು ಇತ್ತೀಚಿಗೆ ಬಿಕಿನಿ ತೊಟ್ಟ ಹುಡುಗಿಯರ ಜತೆಗಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿತ್ತು. ಮತ್ತೀಗ ಗೇಲ್ ತಮ್ಮ ಜನ್ಮದಿನಕ್ಕೆ ತಮ್ಮ ಜತೆ ಈಜಾಡಲು ಲಲನೆಯರನ್ನು ಆಹ್ವಾನಿಸಿ ತಾವು ಪಕ್ಕಾ ಪೋಲಿ ಎಂಬುದನ್ನು ಸಾರಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ