Select Your Language

Notifications

webdunia
webdunia
webdunia
webdunia

ಕಾರಣವಿಲ್ಲದೇ ಕ್ರಿಸ್ ಗೇಲ್ ವಿರುದ್ಧ ಅಪವಾದ: ಡೆರೆನ್ ಸಾಮಿ

ಕಾರಣವಿಲ್ಲದೇ ಕ್ರಿಸ್ ಗೇಲ್ ವಿರುದ್ಧ ಅಪವಾದ: ಡೆರೆನ್ ಸಾಮಿ
ಜಮೈಕಾ , ಶುಕ್ರವಾರ, 27 ಮೇ 2016 (16:04 IST)
ವೆಸ್ಟ್  ಇಂಡೀಸ್‌ಗೆ ಎರಡು ಬಾರಿ ವಿಶ್ವ ಟಿ 20 ವಿಜೇತ ನಾಯಕ ಡ್ಯಾರೆನ್ ಸಾಮಿ ತಮ್ಮ ತಂಡದ ಸಹಆಟಗಾರ ಕ್ರಿಸ್ ಗೇಲ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.  36 ವರ್ಷದ ಗೇಲ್ ಆಸ್ಟ್ರೇಲಿಯಾದ ನಿರೂಪಕಿ ಮೆಲ್ ಮೆಕ್ ಲಾಫ್‌ಲಿನ್ ಅವರನ್ನು ಲೈವ್ ಟಿವಿ ಸಂದರ್ಶನದಲ್ಲಿ ಡೇಟಿಂಗ್‌ಗೆ ಬರುವಂತೆ ಕೇಳಿದ್ದು ವಿವಾದಕ್ಕೆ ಎಡೆ ಕಲ್ಪಿಸಿತ್ತು.
 
 ಐಪಿಎಲ್ ಟೂರ್ನಿಯ ಸಂದರ್ಭದಲ್ಲೂ ಟೈಮ್ಸ್ ಪತ್ರಕರ್ತೆಯನ್ನು ಕೆಲವು ಅನುಚಿತ ಪ್ರಶ್ನೆಗಳನ್ನು ಕೇಳಿ ಕ್ರಿಸ್ ಗೇಲ್ ಮುಜುಗರಕ್ಕೆ ಈಡುಮಾಡಿದ್ದರು. ಆದಾಗ್ಯೂ ಸಾಮಿ ಇತ್ತೀಚಿನ ವಿವಾದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಿಲ್ಲ.  ಕ್ರಿಸ್ ಗೇಲ್ ಯೂನಿವರ್ಸ್ ಬಾಸ್, ನನ್ನ ಟೀಂ ಮೇಟ್ ಆಗಿದ್ದು ನಾನು ಗೌರವಿಸುತ್ತೇನೆ. ಕ್ರಿಸ್ ಗೇಲ್ ಅವರನ್ನು ಯಾವುದೇ ಕಾರಣವಿಲ್ಲದೇ ಜನರು ಗುರಿಮಾಡುತ್ತಿದ್ದಾರೆ. ನನಗೆ ಕ್ರಿಸ್ ಕ್ರಿಕೆಟಿಂಗ್ ಹೀರೊಗಳಲ್ಲಿ ಒಬ್ಬರು. ಅವರು ಎಂಟರ್ ಟೇನರ್ ಆಗಿದ್ದು, ಕ್ರಿಕೆಟ್ ಫೀಲ್ಡ್‌ನಲ್ಲಿ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ನಾನು ಸದಾ ಅವರ ಬಗ್ಗೆ ಅಭಿಮಾನ ಹೊಂದಿದ್ದೇನೆ ಎಂದು ಸಾಮಿ ಹೇಳಿದರು. 
 
ವೆಸ್ಟ್ ಇಂಡೀಸ್ ಆಟಗಾರರು ಮತ್ತು ಆಡಳಿತಗಾರರು ತಮ್ಮ ಅಹಂಗಳನ್ನು ಬದಿಗಿಟ್ಟು ಕ್ಯಾರಿಬಿಯನ್ ದ್ವೀಪಗಳ ಕ್ರಿಕೆಟ್ ಸುಧಾರಣೆಗೆ ಶ್ರಮಿಸಬೇಕು ಎಂದು ಸಾಮಿ ಕರೆನೀಡಿದರು.
 
ಕ್ರೀಡೆ ಮತ್ತು ರಾಜಕೀಯ ಮಿಶ್ರಣವಾಗಬಾರದು ಎಂದು ಹೇಳುವುದು ನಿಜ. ಆದರೆ ಕೊನೆಯಲ್ಲಿ ಅತೀ ಮುಖ್ಯವಾದ ಕ್ರಿಕೆಟ್‌ಗೆ ಹೆಚ್ಚು ಕ್ರೆಡಿಟ್ ನೀಡಬೇಕು. ಕ್ರಿಕೆಟ್ ಆಡುವವರು ಕ್ರಿಕೆಟಿಗರು. ಅದು ನಿಮ್ಮ ಉತ್ಪನ್ನ. ನೀವು ಜೋಳ ಬೆಳೆಸುವುದಾದರೆ ಅದನ್ನು ಪೋಷಿಸಬೇಕು, ರಸಗೊಬ್ಬರ ಎರೆಯಬೇಕು ಆಗ ಮಾತ್ರ ನಿಮಗೆ ಫಲ ಸಿಗುತ್ತದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ಕೂಡ ಇದು ಹೋಲಿಕೆಯಾಗುತ್ತದೆ ಎಂದು ಸಾಮಿ ವಿಶ್ಲೇಷಿಸಿದರು. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿಗೆ ಬೌಲಿಂಗ್ ಮಾಡುವುದಾಗಿದ್ದರೆ ಚಿಂತೆ ಪಡಬೇಕಿತ್ತು: ವಾಸಿಂ ಅಕ್ರಂ