Select Your Language

Notifications

webdunia
webdunia
webdunia
webdunia

ಬ್ಯಾಟಿಂಗ್ ಎಂದರೆ ಫ್ಯಾಷನ್, ಫೀಲ್ಡಿಂಗ್ ಎಂದರೆ ಟಾರ್ಚರ್: ಸಚಿನ್ ತೆಂಡೂಲ್ಕರ್

ಬ್ಯಾಟಿಂಗ್ ಎಂದರೆ ಫ್ಯಾಷನ್, ಫೀಲ್ಡಿಂಗ್ ಎಂದರೆ ಟಾರ್ಚರ್: ಸಚಿನ್ ತೆಂಡೂಲ್ಕರ್
ನವದೆಹಲಿ , ಶನಿವಾರ, 8 ಅಕ್ಟೋಬರ್ 2016 (15:52 IST)
30,000ಕ್ಕೂ ಹೆಚ್ಚು ರನ್ ಕಲೆ ಹಾಕಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷ ದೀರ್ಘ ಅವಧಿಯ ವೃತ್ತಿ ಜೀವನದಲ್ಲಿ ಮಾಡಿದ ದಾಖಲೆಗಳಿಗೆ ಲೆಕ್ಕವೇ ಇಲ್ಲ. ಈ ಕ್ರಿಕೆಟ್ ಮಾಂತ್ರಿಕನಿಗೆ ಬೌಲ್ ಮಾಡುವುದಕ್ಕೆ ಹೆಚ್ಚಿನ ಬೌಲರ್‌ಗಳು ಅಂಜಿ ನಡಗುತ್ತಾರೆ. ಅವರನ್ನು ನೆನಪಿಸಿಕೊಂಡು ನಿದ್ದೆಯಲ್ಲಿಯೂ ಬೆಚ್ಚಿ ಬೀಳುತ್ತಾರೆ. ಆದರೆ ಕ್ರಿಕೆಟ್ ದೇವರಿಗೂ ಒಂದು ಭಯವಿದೆಯಂತೆ. ಅದೇನು? 
ಅದನ್ನು ಅವರದೇ ಮಾತುಗಳಲ್ಲಿ ಕೇಳಿ: ನಾನು ದೈಹಿಕವಾಗಿ ಸದೃಢನಾಗಿದ್ದೆ. ಆದರೆ ಕ್ಷೇತ್ರರಕ್ಷಣೆ ಅಂದರೆ ನನಗೆ ಚಿತ್ರಹಿಂಸೆ ಎನ್ನಿಸುತ್ತಿತ್ತು. 
 
 ಬ್ರಾಂಡ್ ಅಂಬಾಸಿಡರ್ ಆಗಿ ನವದೆಹಲಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಸಚಿನ್ ತೆಂಡೂಲ್ಕರ್ ಈ ಸತ್ಯವನ್ನು ಹೊರಹಾಕಿದ್ದಾರೆ. ಆದರೆ ಅಂಕಿಅಂಶಗಳ ಲೆಕ್ಕಾಚಾರದಲ್ಲಿ ಲಿಟ್ಲ ಮಾಸ್ಟರ್ ಭಾರತದ ಅತ್ಯಂತ ಯಶಸ್ವಿ ಕ್ಷೇತ್ರರಕ್ಷಕರಲ್ಲಿ ಏಕದಿನ ವಿಭಾಗದಲ್ಲಿಎರಡನೆಯ ಮತ್ತು ಟೆಸ್ಟ್ ವಿಭಾಗದಲ್ಲಿ ಮೂರನೆಯ ಸ್ಥಾನದಲ್ಲಿ ನಿಲ್ಲುತ್ತಾರೆ. ಏಕದಿನ ವಿಭಾಗದಲ್ಲಿ ಅವರು 115 ಕ್ಯಾಚ್ ಪಡೆದಿದ್ದರೆ, ಟೆಸ್ಟ್ ವಿಭಾಗದಲ್ಲಿ 140 ಕ್ಯಾಚ್ ಹಿಡಿದಿದ್ದಾರೆ. ಹಾಗೆ ನೋಡುವುದಾದರೆ ತಮಗೆ ಅತ್ಯಂತ ಹೆಚ್ಚು ಟಾರ್ಚರ್ ನೀಡುವ ವಿಷಯದಲ್ಲೂ ಅವರು ಮಾಸ್ಟರ್ ಆಗಿದ್ದರು ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ. 
 

Share this Story:

Follow Webdunia kannada

ಮುಂದಿನ ಸುದ್ದಿ

ಪೊರಕೆ ಹಿಡಿದ ವಿರಾಟ್ ಕೊಹ್ಲಿಗೆ ಮೋದಿ ಶ್ಲಾಘನೆ